ಮತದಾನಕ್ಕೂ ಮುನ್ನ ರಾಮುಲು ಟೆಂಪಲ್​ ರನ್​​​

ಬಳ್ಳಾರಿ: ಮತದಾನಕ್ಕೂ ಮುನ್ನ ಸಂಸದ ಶ್ರೀರಾಮುಲು ದೇವರ ಮೊರೆ ಹೋದರು. ಕುಟುಂಬ ಸಮೇತರಾಗಿ ನಗರದ ಕೋಟೆ ಮಲ್ಲೇಶ್ವರ, ಕನಕ ದುರ್ಗಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈಗಾಗಲೇ ಮನೆಯಲ್ಲಿ ವಿಶೇಷ ಪೂಜೆ ನಡೆಸಿದ್ದಾರೆ. ಮತದಾನದ ಬಳಿಕ ರಾಮುಲು ಮೊಳಕಾಲ್ಮೂರಿಗೆ ತೆರಳಲಿದ್ದಾರೆ.