ರಾಮನಗರ ಉಪಚುನಾವಣೆ ಫಲಿತಾಂಶ, 20 ಸುತ್ತಿನಲ್ಲಿ ನಡೆಯಲಿದೆ ಮತ ಎಣಿಕೆ

ರಾಮನಗರ: ರಾಮನಗರ ವಿಧಾನ ಸಭೆಗೆ ನಡೆದ ಉಪಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಮ್​ನಲ್ಲಿ ಮತ ಎಣಿಕೆಗೆ 2 ಕೌಂಟಿಂಗ್ ಹಾಲ್​ಗಳಿರುತ್ತವೆ. ಮೊದಲಿಗೆ ಪೋಸ್ಟಲ್ ಮತಗಳ ಕೌಂಟಿಂಗ್ ನಡೆಸಿ, ನಂತರ ಇವಿಎಂ ಮೆಷಿನ್ ಕೌಂಟಿಂಗ್ ನಡೆಯುತ್ತೆ. 20 ಸುತ್ತಿನ ಮತ ಎಣಿಕೆ ನಡೆಯಲಿದೆ ಎಂದು ರಾಮನಗರ ವಿಧಾನ ಸಭೆ ಮತ ಎಣಿಕೆ ಕುರಿತು ಚುನಾವಣಾಧಿಕಾರಿ ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದರು.

ಇನ್ನು ಪ್ರತಿ ಸುತ್ತಿನಲ್ಲೂ 14 ಪೋಲಿಂಗ್ ಸ್ಟೇಷನ್​ ಗಳ ಎಣಿಕೆ ನಡೆಯಲಿದೆ. 11.30 ರೊಳಗೆ ಮತ ಎಣಿಕೆ ಕಾರ್ಯ ಮುಗಿಯಲಿದೆ. ಎರಡೂ ರೂಮ್ ನಲ್ಲಿ 14 ಟೇಬಲ್​ಗಳಿರುತ್ತವೆ. ಪ್ರತಿ ಟೇಬಲ್​ನಲ್ಲಿ 3 ಜನ ಅಧಿಕಾರಿಗಳಿರುತ್ತಾರೆ. ಒಟ್ಟು 47 ಜನ ಅಧಿಕಾರಿಗಳಿರುತ್ತಾರೆ, ಹೆಚ್ಚುವರಿಯಾಗಿ 10 ಜನ ಇರುತ್ತಾರೆ ಎಂದು ತಿಳಿಸಿದರು.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv