ಗೃಹ ಸಚಿವ ಎಂ.ಬಿ ಪಾಟೀಲ್‌ಗೆ ಬುದ್ಧಿ ಕಡಿಮೆ ಇದೆ: ರಮೇಶ್ ಜಿಗಜಿಣಗಿ

ವಿಜಯಪುರ: ಗೃಹ ಸಚಿವ ಎಂ.ಬಿ ಪಾಟೀಲ್‌ಗೆ ಬುದ್ಧಿ ಕಡಿಮೆ ಇದೆ. ಇನ್ನು ಸಣ್ಣವ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಂ.ಬಿ ಪಾಟೀಲ್ ಕೂಡ ರಾಜಕೀಯ ಬಿಟ್ಟು ಒಂದು ದಿನ ಮನೆಗೆ ಹೋಗುವವರು ಇದ್ದಾರೆ. ಎಂ.ಬಿ ಪಾಟೀಲ್ ತಂದೆಯವರ ಜೊತೆಗೆ ನಾನು ರಾಜಕೀಯ ಮಾಡಿದ್ದೇನೆ. ಆದ್ರೆ, ಅವರಿಗೆ ಬುದ್ಧಿ ಹೇಳುವಷ್ಟು ನಾನಿಲ್ಲ. ಅದಕ್ಕಾಗಿ ಅವರಿಗೆ ಆ ದೇವರು ಬುದ್ಧಿ ಹೇಳ್ತಾನೆ. ನನ್ನ ವಿರುದ್ಧ ಹೆಣ್ಣು ಮಗಳನ್ನ ನಿಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಸುನಿತಾ ಚವ್ಹಾಣ್ ಗೆದ್ದರೆ ನನಗೂ ಖುಷಿ ಆಗುತ್ತದೆ. ಬೇಕಿದ್ರೆ ನನ್ನ ಸೋಲಿಸಲಿ ಎಂದು ರಮೇಶ್ ಜಿಗಜಿಣಗಿ ಹೇಳಿದರು.

ಶಾಸಕ ನಡಹಳ್ಳಿ ಮೇಲೆ ಎಂ. ಬಿ ಪಾಟೀಲ್‌ ಬೆಂಬಲಿಗರು ಹಲ್ಲೆ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ದುರ್ಘಟನೆ ಆಗಬಾರದಿತ್ತು. ಅದನ್ನು ಇಲ್ಲಿಗೆ ಬಿಟ್ಟು ಬಿಡ್ರಿ ಎಂದು ಜಿಗಜಿಣಗಿ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv