ಸತೀಶ್​ ಗೋಮುಖ ವ್ಯಾಘ್ರ, ಭಿನ್ನಮತ ಶುರುವಾಗಿದ್ದು ಅವ್ರಿಂದಲೇ: ರಮೇಶ್ ಜಾರಕಿಹೊಳಿ

ಬೆಳಗಾವಿ: ಸತೀಶ್​ ಜಾರಕಿಹೊಳಿ ಗೋಮುಖ ವ್ಯಾಘ್ರ’ ಅಂತಾ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್​ ಜಾರಕಿಹೊಳಿ ಆರೋಪಿಸಿದ್ದಾರೆ.

ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರ ನಡುವಿನ ವಾಕ್ಸಮರ ದಿನೇ ದಿನೇ ಮಿತಿ ಮೀರುತ್ತಿದೆ. ಮೊನ್ನೆಯಷ್ಟೇ ಅಣ್ಣಾ ರಮೇಶ್ ಜಾರಕಿಹೊಳಿ ವಿರುದ್ಧ ತಮ್ಮ ಸತೀಶ್ ಜಾರಕಿಹೊಳಿ ಗುಡುಗಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಮೇಶ್ ಜಾರಕಿಹೊಳಿ, ನಾನು ಸದ್ಯ ಕಾಂಗ್ರೆಸ್ ಬಿಟ್ಟಿಲ್ಲ, ತಾಂತ್ರಿಕವಾಗಿ ಪಕ್ಷದಲ್ಲಿ ಇದ್ದೇನೆ. ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ. ಸಚಿವ ಸತೀಶ್​​ ಜಾರಕಿಹೊಳಿ ತಲೆ ಕೆಟ್ಟಿರುವ ಹಾಗೆ ಮಾತನಾಡುತ್ತಿದ್ದಾನೆ ಎಂದಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ..? ಕುತೂಹಲ ಮೂಡಿಸಿದ ಜಾರಕಿಹೊಳಿ ಹೇಳಿಕೆ..!

ಇದಕ್ಕೆ ಇಂದು ಪ್ರತಿಕ್ರಿಯಿಸಿದ್ದ  ಸಚಿವ ಸತೀಶ್ ಜಾರಕಿಹೊಳಿ, ರಮೇಶ್​​ನನ್ನ ತಡೆಯದಿದ್ರೆ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಅಂತಾ ಹೇಳಿದ್ರು. ಇದೀಗ ಮತ್ತೆ ತಮ್ಮನ ವಿರುದ್ಧ ಮಾಧ್ಯಮಗಳ ಎದುರು ಕಿಡಿಕಾರಿರುವ ರಮೇಶ್​ ಜಾರಕಿಹೊಳಿ, ಸತೀಶ್​ ಜಾರಕಿಹೊಳಿ ಹತಾಷಾ ಮನೋಭಾವದಿಂದ ಈ ರೀತಿಯ ವರ್ತನೆ ಮಾಡುತ್ತಿದ್ದಾರೆ. ನನ್ನ ಕಥೆ ತೋಳ ಬಂತು ತೋಳ ಎನ್ನುವಂತೆ ಆಗಿರೋದು ನಿಜ. ಒಬ್ಬನೇ ರಾಜೀನಾಮೆ ಕೊಡೋದು ಬೇಡ ಅಂತ ಸುಮ್ಮನೇ ಇದ್ದೇನೆ. ಭಿನ್ನಮತ ಆರಂಭಕ್ಕೆ ಸಚಿವ ಸತೀಶ್ ಜಾರಕಿಹೊಳಿಯೇ ಕಾರಣ. ನಾನು ಸಚಿವನಾಗಿ ಆರಾಮಾಗಿದ್ದೆ. ಅವರು ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪ್ರಚೋದನೆ ಕೊಟ್ಟರು. ಬಂಡಾಯಕ್ಕೆ ಪ್ರಚೋದನೇ ನೀಡಿದ್ದೇ ಸತೀಶ್ ಜಾರಕಿಹೊಳಿ ಅಂತಾ ಹೇಳಿದರು.

ಇದನ್ನೂ ಓದಿ: ಕಡಲ ಮಂಥನದಲ್ಲಿ ಅಮೃತನೂ ಬರುತ್ತೆ, ವಿಷಾನೂ ಬರುತ್ತೆ-ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ..? ಕುತೂಹಲ ಮೂಡಿಸಿದ ಜಾರಕಿಹೊಳಿ ಹೇಳಿಕೆ..!

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv