‘ಡಿಕೆಎಸ್ ನನ್ನ ಲೆವಲ್ ಅಲ್ಲಾ, ನನ್ನ ಲೀಡರ್ ಏನಿದ್ರೂ ರಾಹುಲ್ ಗಾಂಧಿ’ ರಮೇಶ್ ವಾಗ್ದಾಳಿ

ಬೆಂಗಳೂರು: ರಾಜೀನಾಮೆ ವಿಚಾರದಲ್ಲಿ ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಯು-ಟರ್ನ್​ ಹೊಡೆದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ರಾಜೀನಾಮೆ ನೀಡಲು ಇಂದು ನಗರಕ್ಕೆ ಆಗಮಿಸಿದ್ದ ರಮೇಶ್​ ಜಾರಕಿಹೊಳಿ, ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ  ಏಕವಚನದಲ್ಲೇ ತೀವ್ರ ವಾಗ್ಧಾಳಿ ನಡೆಸಿದ್ರು. ನಗರದಲ್ಲಿ ಮಾತನಾಡಿದ ಅವರು, ಅವನು ನನ್ನ ಲೆವಲ್ ಅಲ್ಲಾ. ಅವನು ಸುಮ್ಮನೆ ಹೇಳುತ್ತಾನಷ್ಟೆ. ನನ್ನ ಲೀಡರ್ ಏನಿದ್ರೂ, ಅದು ರಾಹುಲ್ ಗಾಂಧಿ. ಅವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಅಂತಾ ಹೇಳಿದ್ರು. ಇದೇ ವೇಳೆ, ನಾನು ರಾಜೀನಾಮೆ ನೀಡುವುದು ಸತ್ಯ. ಯಾವಾಗ ರಾಜೀನಾಮೆ ಕೊಡ್ತೇನೆ ಅನ್ನೋದನ್ನ ನಾನೇ ಹೇಳ್ತೇನೆ. ಒಬ್ಬನೇ ರಾಜೀನಾಮೆ ಕೊಟ್ರೆ ಉಪಯೋಗವಿಲ್ಲ. ಒಟ್ಟಾಗಿ ಕೆಲ ಜನ ಸೇರಿ ರಾಜೀನಾಮೆ ಕೊಡುತ್ತೇವೆ. ಇನ್ನೂ ಕೆಲವರ ಜೊತೆ ಚರ್ಚೆ ಮಾಡಬೇಕಿದೆ. ಅವರ ಜೊತೆ ಚರ್ಚೆ ಮಾಡಿ ತೀರ್ಮಾನ ತಗೋತೀನಿ ಅಂತಾ ಕೂಡಾ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv