ಬಿಜೆಪಿ ಎಂಪಿ ಜಾಧವ್​​ರನ್ನು ಸನ್ಮಾನಿಸಿದ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್​​ ಜಾರಕಿಹೊಳಿ

ಬೆಂಗಳೂರು: ಕಾಂಗ್ರೆಸ್​ ರೆಬೆಲ್​ ಶಾಸಕ ರಮೇಶ್​​ ಜಾರಕಿಹೊಳಿ ನೂತನ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್​​ರನ್ನು ಸನ್ಮಾನಿಸಿದ್ದಾರೆ. ತಮ್ಮ ನಿವಾಸದಲ್ಲಿ ಡಾ.ಉಮೇಶ್ ಜಾಧವ್ ಮತ್ತು ಬಿಜೆಪಿ ನಾಯಕರನ್ನ  ಭೇಟಿಯಾದ  ಜಾರಕಿಹೊಳಿ ತಡರಾತ್ರಿವರೆಗೂ ಮಾತುಕತೆ ನಡೆಸಿದ್ರು. ಮಾತುಕತೆ ಬಳಿಕ ಬಿಜೆಪಿಯ ನೂತನ ಸಂಸದರಾಗಿ ಆಯ್ಕೆಯಾಗಿರುವ ಜಾಧವ್​ರನ್ನು ಸನ್ಮಾನಿಸಿದರು. ಈ ವೇಳೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಹಾಗೂ ಮಾಲೀಕಯ್ಯ ಗುತ್ತೇದಾರ್ ಉಪಸ್ಥಿತರಿದ್ದರು. ಇನ್ನು ರಾಜೀನಾಮೆ ನೀಡುವುದಾಗಿ ಈ ಹಿಂದೆ ಬಹಿರಂಗ ಹೇಳಿಕೆ ನೀಡಿದ್ದ ರಮೇಶ್​ ಜಾರಕಿಹೊಳಿ, ಬಿಜೆಪಿ ನಾಯಕರ ಜೊತೆಗೆ ರಾತ್ರಿ ಏನು ಚರ್ಚೆ ನಡೆಸಿರಬಹುದು ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಬಿಜೆಪಿ ಬ್ಯಾನರ್​ನಲ್ಲಿ ರಮೇಶ್​ ಜಾರಕಿಹೊಳಿ ಫೋಟೊ, ಎನಿದರ ಅರ್ಥ!? 

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv