ಕಾಂಗ್ರೆಸ್​ಗೆ ಲೀಡರ್​ಶಿಪ್ ಇಲ್ಲ, ಜೆಡಿಎಸ್​ ಒಂದೇ ಮನೆ ಪಾರ್ಟಿ: ಗೋವಿಂದ ಕಾರಜೋಳ

ಬೆಳಗಾವಿ: ಒಂದೇ ವಿಮಾನದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಶಾಸಕ ರಮೇಶ್ ಜಾರಕಿಹೊಳಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ನಾನು ಹೋಗುವುದಕ್ಕೂ ರಮೇಶ್ ಬರುವುದಕ್ಕೂ ಸಂಬಂಧ ಇಲ್ಲ. ಚುನಾವಣೆ ರಿಸಲ್ಟ್ ಗೂ ಮುನ್ನವೇ ಸರ್ಕಾರ ಪತನವಾಗಲಿದೆ‌. ಮೇ 23ರ ಒಳಗೆ ಸರ್ಕಾರ ಪತನವಾಗಲಿದೆ‌. ಕಾಂಗ್ರೆಸ್​ನಿಂದ ಜೆಡಿಎಸ್​ನಿಂದ ಅನೇಕ ಶಾಸಕರು ಹೊರ ಬರುತ್ತಾರೆ. ಭವಿಷ್ಯದ ಚಿಂತೆಗಾಗಿ ಶಾಸಕರು ಹೊರ ಬರುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಲೀಡರ್​​ಶಿಪ್ ಇಲ್ಲ ಎಂದು ಹೊರ ಬರುತ್ತಿದ್ದಾರೆ. ಜೆಡಿಎಸ್​​ನಲ್ಲಿ ಒಂದೇ ಮನೆ ಪಾರ್ಟಿಯಾಗಿದ್ದಕ್ಕೆ ಹೊರ ಬರುತ್ತಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಬರುತ್ತಿದ್ದರೆ ಸ್ವಾಗತ. ರಮೇಶ್ ಜಾರಕಿಹೊಳಿ ಜತೆಗೆ ಇನ್ನೂ ಅನೇಕ ಶಾಸಕರು ಇದ್ದಾರೆ. ಅವರು ಬರ್ತಾರೆ, ಬರುವ ತನಕ ಕಾಯಬೇಕು ಎಂದರು.