ಸಹೋದರನಿಗಾಗಿ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧವಾದ ರಮೇಶ್ ಜಾರಕಿಹೊಳಿ!

ಬೆಳಗಾವಿ: ಯಾರಾದ್ರು ಮಧ್ಯಸ್ಥಿಕೆ ವಹಿಸಿದ್ರೆ ಸತೀಶ್​ ಜಾರಕಿಹೊಳಿಗೆ ಸಚಿವ ಸ್ಥಾನ ಬಿಟ್ಟು‌ಕೊಡಲು ನಾನು ಸಿದ್ಧ ಅಂತಾ ಸಚಿವ ರಮೇಶ್​ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸಚಿವರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ರಮೇಶ್​ ಜಾರಕಿಹೊಳಿಗೆ ಬೆಂಬಲಿಗರಿಂದ ಅದ್ದೂರಿ ಸ್ವಾಗತ ಸಿಕ್ಕಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹೋದರ ಸತೀಶ್ ಜಾರಕಿಹೊಳಿ ಅನುಭವಿ ರಾಜಕಾರಣಿ. ಅವರು ಭಿನ್ನಮತ ಮಾಡಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವುದು ಊಹಾಪೋಹ ಅಂತಾ ಸ್ಪಷ್ಟನೆ ನೀಡಿದ್ರು. ಇನ್ನು, ಸತೀಶ್ ಜಾರಕಿಹೊಳಿ ಮನವೊಲಿಸಲು ಅವರೇನು ಸಣ್ಣ ಹುಡುಗ ಅಲ್ಲ. ಅವರು ರಾಜಕೀಯದಲ್ಲಿ ಪ್ರಭುತ್ವತೆ ಪಡೆದಿದ್ದಾರೆ. ಕಾ‌ಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು ಅಂತಾ ತಿಳಿಸಿದ್ರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರ ಬೇಕು. ಆದ್ರೆ ಸಂದರ್ಭಕ್ಕೆ ಅನುಸಾರವಾಗಿ ತ್ಯಾಗ ಮನೋಭಾವ ಕೂಡ ಇರಬೇಕು ಎಂದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv