ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ, ಅಭಿಮಾನಿಗಳ ಸಂಭ್ರಮ

ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ‌ ಶಾಸಕರ ಅಭಿಮಾನಿಗಳು ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಅಣ್ಣ-ತಮ್ಮನ ನಡುವೆ ಸಚಿವ ಸ್ಥಾನ ಯಾರ ಪಾಲಾಗುತ್ತೆ ಅನ್ನೋ ಕುತೂಹಲ ಜಿಲ್ಲಾದ್ಯಂತ ಮೂಡಿತ್ತು. ಆದರೆ ತಮ್ಮ ಸತೀಶ್​ ಜಾರಕಿಹೊಳಿ ಅವರನ್ನು ಪಕ್ಕಕ್ಕೆ ತಳ್ಳಿರುವ ಮೈತ್ರಿ ಸರ್ಕಾರ, ಅಣ್ಣ ರಮೇಶ್​ ಜಾರಕಿಹೊಳಿಗೆ ಮಣೆ ಹಾಕಿದೆ. ಸದ್ಯ ತಮ್ಮ ನೆಚ್ಚಿನ ನಾಯಕ ರಮೇಶ್​ ಜಾರಕಿಹೊಳಿಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಸಂತೋಷಗೊಂಡಿರುವ ಬೆಂಬಲಿಗರು, ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv