ರಾಮನವಮಿಗೆ ರಾಮರಸ ಕುಡಿದು 8 ಮಂದಿ ಅಸ್ವಸ್ಥ..!

ಹಾಸನ: ನಿನ್ನೆ ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ, ರಾಮ ರಸ ಕುಡಿದು ಎಂಟು ಮಂದಿ ಅಸ್ವಸ್ಥರಾದ ಘಟನೆ ಜಿಲ್ಲೆಯ ಬೈಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ನಿನ್ನೆ ರಾಮನವಮಿ ಆಚರಣೆ ಮಾಡಲಾಗುತ್ತಿತ್ತು. ಈ ವೇಳೆ ರಾಮ ರಸ ಸೇವಿಸಿದ್ದ ಎಂಟು ಮಂದಿ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಡಿಎಚ್ಓ ಸತೀಶ್ ಹೇಳಿದ್ದಾರೆ.


firstNewsKannada  Instagram: firstnews.tv  Facebook: firstnews.tv  Twitter: firstnews.tv