ವಿದ್ಯಾರ್ಥಿಗಳಿಂದ VOTE ಸಂದೇಶ..!

ರಾಮನಗರ: ವಿಧಾನಸಭಾ ಚುನಾವಣೆ ಸಮೀಪಿಸುತಿದ್ದಂತೆ ರಾಜಕೀಯ ಪಕ್ಷಗಳು ಹಣ, ಹೆಂಡ, ವಸ್ತುಗಳ ಆಮಿಷ ತೋರಿಸಿ ಜನರಿಂದ ಮತ ಕಸಿಯುವ ತಂತ್ರ ಮಾಡುತ್ತಿದ್ದಾರೆ. ಆದರೆ ಮತದಾರರು ಯಾವ ಆಮಿಷಗಳಿಗೂ ಒಳಗಾಗದೆ ತಮ್ಮ ಅಮೂಲ್ಯ ಮತವನ್ನ ಅರ್ಹ ಅಭ್ಯರ್ಥಿಗೆ ನೀಡುವಂತೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದ್ದಾರೆ. ಗುರುವಾರ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಎರಡು ಸಾವಿರ‌ ವಿದ್ಯಾರ್ಥಿಗಳು ಸೇರಿ ಮಾನವ ನಿರ್ಮಿತ VOTE ಸಂದೇಶ ಮೂಡಿಸಿದರು.

 

Leave a Reply

Your email address will not be published. Required fields are marked *