ರಾಮನಗರ: ಅನಿತಾ ಕುಮಾರಸ್ವಾಮಿಗೆ 1,25,043 ಮತ, ಬಿಜೆಪಿಗೆ ಎಷ್ಟು..?!

ರಾಮನಗರ: ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಭರ್ಜರಿ ಗೆಲುವು ದಕ್ಕಿದ ಹಿನ್ನೆಲೆಯಲ್ಲಿ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ದಾಖಲೆಯ ಜಯ ಗಳಿಸಿದ್ದಾರೆ. 1,05,906 ಮತಗಳ ಅಂತರದ ದಾಖಲೆ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 1,25,043 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಎಲ್​. ಚಂದ್ರಶೇಖರ್​​ 15,906 ಮತಗಳನ್ನು ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳು ಪಡೆದ ಮತ ವಿವರ ಇಲ್ಲಿದೆ.
ಹೆಚ್. ಡಿ. ರೇವಣ್ಣ : 2231
ಕುಮಾರ್ ನಾಯ್ಕ್: 520
ಡಿ.ಎಂ. ಮಾದೇಗೌಡ: 536
ಮುನಿಯಪ್ಪ: 4064
ಸುರೇಂದ್ರ ಬಿ.ಪಿ: 545
ಶಂಭು ಲಿಂಗೇಗೌಡ: 5,483
ನೋಟಾಗೆ ಚಲಾವಣೆಯಾದ ಮತಗಳು: 15,478
ಚಲಾವಣೆಯಾದ ಒಟ್ಟು ಮತಗಳು: 1,48,168

ರಾಮನಗರ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಎರಡು ದಿನ ಮೊದಲಿಗೆ ಬಿಜೆಪಿ ಅಭ್ಯರ್ಥಿ ಚುನಾವಣೆ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಬಿಜೆಪಿ ಅಭ್ಯರ್ಥಿ ಎಲ್​​. ಚಂದ್ರಶೇಖರ್​​ ಅವರು 15 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದು ವಿಶೇಷ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv