ಮೋದಿ ಬಿಟ್ರೆ, ಹೆಚ್ಚು ಸುಳ್ಳು ಹೇಳಿದ ವ್ಯಕ್ತಿ ಪ್ರತಾಪ್ ಸಿಂಹ: ಸಿದ್ದರಾಮಯ್ಯ

ಕೊಡಗು: ರಾಮ ಮಂದಿರ ಕಟ್ಟುತ್ತೀವಿ ಅಂತಿದೀರಲ್ವಾ ಇನ್ನೂ ಯಾಕೆ ಕಟ್ಟಿಲ್ಲ? ಇಟ್ಟಿಗೆ ಕಬ್ಬಿಣ ದುಡ್ಡು ಇಸ್ಕೊಂಡು ಹೋದ್ರಲ್ಲಾ ಅದೆಲ್ಲಾ ಎಲ್ಲಿದೆ. ಇದಕ್ಕೆಲ್ಲಾ ಮೋದಿ ಉತ್ತರ ಕೊಡ್ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಕುಶಾಲನಗರದಲ್ಲಿ ಮೈತ್ರಿ ಅಭ್ಯರ್ಥಿ ವಿಜಯ್​ ಶಂಕರ್​ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, 5 ವರ್ಷ ಆಡಳಿತ ಮಾಡಿ ಮತ್ತೆ ಅಧಿಕಾರ ಬೇಕು ಅಂತ ಬಿಜೆಪಿ ಬಂದಿದೆ. ಹಾಗೆ ಮತ್ತೆ ಬರುವಾಗ ಏನು ಅಭಿವೃದ್ಧಿ ಮಾಡಿದೀವಿ ಅಂತ ಹೇಳ್ಬೇಕಲ್ವಾ? ಅವರು ಅದನ್ನು ಮಾತಾಡ್ತಿಲ್ಲ. ಇದ್ರಲ್ಲೇ ಗೊತ್ತಾಗುತ್ತೆ ಅವರು ಏನು ಅಭಿವೃದ್ಧಿ ಮಾಡಿದಾರೆ ಅಂತಾ. ಕೊಟ್ಟ ಬೇಡಿಕೆ ಈಡೇರಿಸಿದ್ದೇನೆ ಅಂತ ಹೇಳೋ ನೈತಿಕತೆ ಮೋದಿಗೆ ಉಂಟಾ. ಇನ್ನು ಆರ್ಟಿಕಲ್ 32 ಸ್ಕ್ರ್ಯಾಪ್ ಮಾಡೋ ಬಗ್ಗೆ ಜನಸಂಘ ಹುಟ್ಟಿದಾಗಿನಿಂದ ಹೇಳ್ತಿದಾರೆ. ಆದ್ರೆ ಏನು ಮಾಡೋಕೆ ಆಗಿಲ್ಲ. ಆಹಾ ಪ್ರತಾಪ್ ಸಿಂಹ, ಇದೀಗ ಸಿಟ್ಟಿಂಗ್ ಎಂಪಿ ಏನ್ ಮಾಡಿದೀಯಪ್ಪಾ ಕೊಡಗಿನ ಕಾಳುಮೆಣಸು ಬೆಳೆಗಾರರ ಅಭಿವೃದ್ಧಿಗೆ? ಕೊಡಗಿನ ಪ್ರಾಕೃತಿಕ ವಿಕೋಪಕ್ಕೆ ಎಷ್ಟು ಹಣ ಕೊಡಿಸಿದೀಯಪ್ಪ ಪ್ರತಾಪ…. ನರೇಂದ್ರ ಮೋದಿ ಬಿಟ್ರೆ ಹೆಚ್ಚು ಸುಳ್ಳು ಹೇಳಿದ ವ್ಯಕ್ತಿ ಪ್ರತಾಪ್ ಸಿಂಹ. ಬಿಜೆಪಿ ರಾಷ್ಟ್ರಾಧ್ಯಕ್ಷ 3 ವರ್ಷ ಜೈಲಿಗೆ ಹೋಗಿ ಬಂದ ವ್ಯಕ್ತಿ. ಈಗ ಬೇಲ್ ಮೇಲೆ ಹೊರಗೆ ಇದ್ದಾನೆ. ಮೋದಿಯ 56 ಇಂಚಿನ ಎದೆ ಪೈಲ್ವಾನರ ಜೊತೆ ಕೂಡ ಇರುತ್ತೆ. ಆದ್ರೆ ರೈತರು, ಬಡವರ ಪರ ಇರೋ ಹೃದಯ ಇರಬೇಕಲ್ವಾ ಅಂತಾ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv