ಹಲವು ವರ್ಷಗಳಿಂದ ಜೈಲಿನಲ್ಲಿದ್ದ ಸಾಧ್ವಿ ಪ್ರಗ್ಯಾ ಸಿಂಗ್​ರ ಆಸ್ತಿ ಎಷ್ಟು ಗೊತ್ತಾ?

ಭೋಪಾಲ್​: ಭಾರತೀಯ ಜನತಾ ಪಕ್ಷದ ವತಿಯಿಂದ ಭೋಪಾಲ್​ನಲ್ಲಿ ನಾಮಪತ್ರ ಸಲ್ಲಿಸಿದ ಸಾಧ್ವಿ ಪ್ರಗ್ಯಾಸಿಂಗ್​ ಬಳಿಕ ಒಟ್ಟು 4,44, 224 ರೂಪಾಯಿ ಮೌಲ್ಯದ ಆಸ್ತಿ ಇದೆಯಂತೆ. ಈ ಪೈಕಿ 90 ಸಾವಿರ ರೂಪಾಯಿ ಕ್ಯಾಶ್​ ಹೊಂದಿರುವ ಅವರು, 99 ಸಾವಿರದ 824 ರೂಪಾಯಿಗಳನ್ನ ಬ್ಯಾಂಕ್​ನಲ್ಲಿ ಡಿಪಾಸಿಟ್ ಇಟ್ಟಿದ್ದಾರಂತೆ. ಇನ್ನೂ ತಾವು ಯಾವುದೇ ಕಂಪನಿಯ ಷೇರುಗಳನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು ತಮ್ಮ ಬಳಿ ಕಾರಾಗಲಿ, ಜಮೀನಾಗಲಿ ಇಲ್ಲ ಎಂದಿದ್ದಾರೆ. 48 ಸಾವಿರ ಮೌಲ್ಯದ ಚಿನ್ನದ ಸರ, 16 ಸಾವಿರ ಮೌಲ್ಯದ ಲಾಕೆಟ್​ ಹಾಗೂ 81 ಸಾವಿರ ಮೌಲ್ಯದ ಬೆಳ್ಳಿಯ ಕಮಂಡಲವನ್ನು ಹೊಂದಿರುವುದಾಗಿ ತಮ್ಮ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ. ರಾಮನ ಕೆತ್ತನೆ ಇರುವ ಬೆಳ್ಳಿಯ ಸಾಮಗ್ರಿಯನ್ನು ಹೊಂದಿರುವುದಾಗಿ ತಿಳಿಸಿರುವ ಸಾಧ್ವಿ ಭಿಕ್ಷೆಯೇ ತಮ್ಮ ಆದಾಯದ ಮೂಲ ಎಂದು ತಿಳಿಸಿದ್ದಾರೆ. ಇದರ ಜೊತೆಯಲ್ಲಿ ಎನ್​ಐಎನ ಕೋರ್ಟ್​ನಲ್ಲಿ ಮೂರು ಕ್ರಿಮಿನಲ್​ ಕೇಸ್​ನ ವಿಚಾರಣೆ ನಡೆಯುತ್ತಿದೆ ಎನ್ನುವುದರ ಮಾಹಿತಿಯನ್ನು ಅಫಿಡವಿಟ್​ನಲ್ಲಿ ನೀಡಿರುವ ಅವರು ಮಾಲೇಗಾಂವ್​ ಬ್ಲಾಸ್ಟ್​​ ಕೇಸ್​ನಲ್ಲಿ ತಮ್ಮ ವಿರುದ್ಧ ಇರುವ ಆರೋಪವನ್ನು ಉಲ್ಲೇಖಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv