ರಿಷಭ್ ಮಗನ ಬಗ್ಗೆ ರಕ್ಷಿತ್ ಶೆಟ್ಟಿ ಭವಿಷ್ಯ..!

ರಿಷಭ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಗಾಂಧಿನಗರದ ದೊಡ್ಡ ಐಕಾನ್​ಗಳು. ಇಬ್ಬರು ಒಂದೇ ಮನಸ್ಥಿತಿ ಹೊಂದಿರೋ ಕುಚಿಕು ಗೆಳೆಯರು. ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಮೋಡಿ ಮಾಡಿದ ಈ ಜೋಡಿ ಬಳಿಕ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿರೋ ನಟರು. ರಿಷಭ್ ನಿರ್ದೇಶನದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಬಿಗ್ ಸಕ್ಸಸ್ ಕಂಡಿತ್ತು. ಈ ಚಿತ್ರದ ವೇಳೆ ಗೆಳೆಯ ರಕ್ಷಿತ್ ಶೆಟ್ಟಿ ಅಚ್ಚರಿಯ ಭವಿಷ್ಯವೊಂದನ್ನು ಹೇಳಿದ್ರಂತೆ.

 ಬೆಲ್​ಬಾಟಂಸಕ್ಸಸ್​ನಲ್ಲೇ ಮಗನ ಎಂಟ್ರಿ..!
ಪ್ರಗತಿ ಶೆಟ್ಟಿ ಮತ್ತು ರಿಷಬ್​ ಮನೆಗೆ ಪಕ್ಕಾ ಗಂಡು ಮಗನೊಬ್ಬ ಎಂಟ್ರಿ ಕೊಡ್ತಾನೆ ಅಂತಾ ಚಿತ್ರದ ಯಶಸ್ಸಿನ ವೇಳೆಯೇ ಭವಿಷ್ಯ ಆಡಿದ್ರಂತೆ. ಆದ್ರೆ, ರಿಷಭ್​ಗೆ ಹೆಣ್ಣು ಮಗು ಆಗಲಿ ಅನ್ನೋ ಆಸೆ ಇತ್ತು. ಇದೀಗ ರಕ್ಷಿತ್  ಭವಿಷ್ಯದಂತೆಯೇ ಮನೆಗೆ ಮಿನಿ ಹೀರೋ ಬಂದಾಗಿದೆ. ವಿಶೇಷ ಅಂದ್ರೆ ಇದೇ ವೇಳೆ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿರೋ ಚೊಚ್ಚಲ ಸಿನಿಮಾ ಬೆಲ್​ ಬಾಟಂ ಕೂಡ ಭರ್ಜರಿ ಯಶಸ್ಸು ಗಳಿಸಿ 50 ದಿನ ಪೂರೈಸಿದೆ. ಚಿತ್ರದಲ್ಲಿ ಡಿಟೆಕ್ಟಿವ್ ದಿವಾಕರನಾಗಿ ರಿಷಭ್ ಸಖತ್ತಾಗಿಯೇ ಮಿಂಚಿದ್ರು. ಅಲ್ಲದೇ  ಚಿತ್ರ ಕೂಡ ಹಲವು ಭಾಷೆಗಳಿಗೆ ಡಬ್ಬಿಂಗ್ ರೈಟ್ಸ್​ ಹಕ್ಕನ್ನ ಪಡೆದುಕೊಂಡಿತ್ತು. ಮಗನ ಎಂಟ್ರಿಯಿಂದ ಚಿತ್ರ  ಯಶಸ್ವಿ ದಾಖಲೆಯತ್ತ ಮುನ್ನುಗುತ್ತಿದ್ದು  ರಿಷಬ್ ಹಾಗೂ  ಚಿತ್ರತಂಡದಲ್ಲಿ ಭಾರೀ ಸಂತಸ ತಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv