ರಾಜ್ಯ ಸರ್ಕಾರದಿಂದಲೇ ನಾಳೆ ‘ಅಣ್ಣಾವ್ರ ಹುಟ್ಟುಹಬ್ಬ’ -ಸಿಎಂ ಟ್ವೀಟ್​

ಡಾ.ರಾಜ್​ಕುಮಾರ್.. ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಟ. ಐದು ದಶಕಗಳ ಕಾಲ ಕಲೆಗಾಗಿಯೇ ಜೀವನ ಮುಡಿಪಾಗಿಟ್ಟ ಕಲಾವಿದ. ಇವತ್ತಿಗೂ ಕನ್ನಡ ಚಿತ್ರರಂಗವೆಂದರೇ, ಪರ್ಯಾಯವಾಗಿ ರಾಜ್​ ಹೆಸರು ಪ್ರಸ್ತಾಪಾಗುತ್ತೆ. ಅಷ್ಟರ ಮಟ್ಟಿಗೆ ಡಾ.ರಾಜ್​ ಅಜರಾಮರ ಆಗಿದ್ದಾರೆ. ಅಂದ್ಹಾಗೆ ನಾಳೆ ಅಣ್ಣಾವ್ರ 90ನೇ ಹುಟ್ಟುಹಬ್ಬ. ಹೀಗಾಗಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಒಂದು ದಿನ ಮೊದಲೇ ‘ಅಣ್ಣಾವ್ರ ಹುಟ್ಟುಹಬ್ಬ’ದ ಶುಭಾಶಯ ತಿಳಿಸಿದ್ದಾರೆ.

ಅಣ್ಣಾವ್ರು ಸಾಂಸ್ಕೃತಿಕ ರಾಯಭಾರಿ..!
‘ಡಾ.ರಾಜ್​ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯ. ನಾಳೆ ಅವರ ಹುಟ್ಟುಹಬ್ಬ. ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ರಾಜಣ್ಣ ಅವರ ಹುಟ್ಟು ಹಬ್ಬ ಆಚರಿಸುತ್ತಿದೆ. ಎಲ್ಲರೂ ಭಾಗವಹಿಸಿ. ಡಾ ರಾಜ್ ಹುಟ್ಟುಹಬ್ಬದ ಶುಭಾಶಯಗಳು’ ಅಂತಾ ಸಿ.ಎಂ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.