ಸುಚಿತ್​-ಪವನ್ ದಾಳಿಗೆ ಸೌರಾಷ್ಟ್ರ ತತ್ತರ

ರಾಜ್​ಕೋಟ್​ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಸೌರಾಷ್ಟ್ರ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್​ ನಷ್ಟಕ್ಕೆ 288 ರನ್ ಗಳಿಸಿದೆ. ಟಾಸ್​ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಆರಂಭದಲ್ಲಿ ಉತ್ತಮ ಸ್ಟಾರ್ಟ್​ ಪಡೆಯಿತು. ಆದರೆ ನಂತರ ಟಾಪ್​ ಆರ್ಡರ್ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್ ಪರೇಡ್ ನಡೆಸಿದ್ರು. ಎಡಗೈ ಸ್ಪಿನ್ನರ್ ಸುಚಿತ್​.ಜೆ ಹಾಗೂ ಪವನ್​ ದೇಶಪಾಂಡೆ ದಾಳಿಗೆ ತತ್ತರಿಸಿತು. ಮತ್ತೊಂದೆಡೆ ಸೌರಾಷ್ಟ್ರ ನಾಯಕ ಜಯದೇವ್ ಷಾ ವಿನಯ್ ಪಡೆಯ ಬೌಲರ್​ಗಳ ದಾಳಿಯನ್ನ ಉತ್ತಮವಾಗಿ ಎದುರಿಸಿದ್ರು. ಆದರೆ 97 ರನ್​ಗಳಿಸಿದ ಜಯದೇವ್ ಷಾ ಕೇವಲ ಮೂರು ರನ್​ಗಳಿಂದ ಶತಕ ವಂಚಿತರಾದ್ರು. ಕರ್ನಾಟಕ ಪರ ಸುಚಿತ್​ 5 ವಿಕೆಟ್​ ಪಡೆದು ಮಿಂಚಿದರೆ, ಪವನ್ 3 ವಿಕೆಟ್ ಪಡೆದರು.