ಬಚ್ಚನ್ ಕೌನ್​ ಬನೇಗಾ ಕರೋಡ್​​ ಪತಿಯಲ್ಲ, ಇದು ಕಿತನಾ ಬಡಾ ಕ್ರೈಂ..!

ರಾಜಸ್ಥಾನ: ಕೌನ್​ ಬನೇಗಾ ಕರೋಡ್​​ಪತಿ (ಕೆಸಿಬಿ).. ಭಾರತೀಯ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ ರಿಯಾಲಿಟಿ ಶೋ.. ಬಾಲಿವುಡ್​ನ ಹಿರಿಯ ನಟ, ಬಿಗ್​ ಬಿ ಅಮಿತಾ ಬಚ್ಚನ್​ ಹೋಸ್ಟ್​ ಮಾಡುವುದರ ಮೂಲಕ ಈ ರಿಯಾಲಿಟಿ ಶೋವನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದರು.

ಈ ಕಾರ್ಯಕ್ರಮದ ಜನಪ್ರಿಯತೆಯನ್ನು ಮನಗೊಂಡ ರಾಜಸ್ಥಾನ ಪೊಲೀಸರು, ಅಪರಾಧ ಮತ್ತು ಕಾನೂನುಗಳ ಬಗ್ಗೆ ಜನರಿಗೆ ತಿಳುವಳಿಕೆ ಮತ್ತು ಸೂಕ್ಷ್ಮತೆ ಮೂಡಿಸುವ ಸದುದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದುವೇ, ‘ಕಿತನಾ ಬಡಾ ಕ್ರೈ’.

ರಾಜಸ್ಥಾನ ಪೊಲೀಸರು, ತಮ್ಮ ಅಫೀಶಿಯಲ್​ ಟ್ವಿಟರ್​ ಹಾಗೂ ಫೇಸ್​ಬುಕ್​ ಖಾತೆಯಲ್ಲಿ ಅಫರಾದಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಅವುಗಳಿಗೆ ವಿಧಿಸ ಬಹುದಾದ ಶಿಕ್ಷೆಯ ಸೆಕ್ಷನ್​ಗಳನ್ನು ಬಹು ಆಯ್ಕೆ ಉತ್ತರಗಳಾಗಿ ನೀಡುತ್ತಾ ಜನರಿಗೆ ಆಪರಾಧಗಳ ಕುರಿತು ಹಾಗೂ ಆಪರಾಧಕ್ಕೆ ನೀಡ ಬಹುದಾದು ಶಿಕ್ಷೆ ಪ್ರಮಾಣವನ್ನು ತಿಳಿಸಿ ಕೊಡುತ್ತಿದ್ದಾರೆ. ಸೆ.24ರಿಂದ ಪ್ರತಿ ದಿನ ಒಂದೊಂದು ಪ್ರಶ್ನೆಯನ್ನು ಖಾತೆಯಲ್ಲಿ ಹಾಕಲಾಗುತ್ತಿದೆ. ಸಾಮಾಜಿಕ ಜಾಲತಾಣವನ್ನು ವೇದಿಕೆ ಮಾಡಿಕೊಂಡು, ಸಾಮಾಜಿಕ ಕಳಕಳಿ ತರುವ ರಾಜಸ್ಥಾನ ಪೊಲೀಸರ ಈ ಭಿನ್ನ ಪ್ರಯತ್ನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv