ರಾಜಾಕಾಲುವೆಗೆ ಅಡ್ಡ ಹಾಕಿದ್ದ ಅಕ್ರಮ ಕಾಂಕ್ರೀಟ್​ ಹಲಗೆಗಳ ತೆರವು

ಮಂಗಳೂರು: ಕೆಲವು ದಿನಗಳ ಹಿಂದೆ ಸುರಿದ ಕುಂಭದ್ರೋಣ ಮಳೆಗೆ  ನಗರ ಜಲಾವೃತವಾಗಿದ್ದು ಮಂಗಳೂರಿಗರನ್ನು ನಿಬ್ಬೆರಗಾಗುವಂತೆ ಮಾಡಿತ್ತು. ಇದೆಲ್ಲದಕ್ಕೂ ರಾಜಾಕಾಲುವೆ ಒತ್ತುವರಿಯೇ ಕಾರಣ ಅಂತಾ ಮನಗೊಂಡ ಜಿಲ್ಲಾಡಳಿತ, ಅಕ್ರಮ ಒತ್ತುವರಿ ವಿರುದ್ಧ ಸಮರ ಸಾರಿತ್ತು. ಇಂದು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ರಾಜಕಾಲುವೆಗೆ ಅಡ್ಡ ಹಾಕಿದ ಕಾಂಕ್ರೀಟ್ ಹಲಗೆಗಳನ್ನು ತೆರವುಗೊಳಿಸಿದ್ದಾರೆ. ಮಂಗಳೂರಿನ ಕೊಟ್ಟಾರಚೌಕಿ ಬಳಿ ಇರುವ ಖಾಸಗಿ ಕಾಲೇಜು ಆಡಳಿತ ಮಂಡಳಿ ಅಕ್ರಮವಾಗಿ ಕಾಂಕ್ರೀಟ್ ಹಲಗೆ ಹಾಕಲಾಗಿತ್ತು. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾಂಕ್ರೀಟ್​ ಹಲಗೆಗಳನ್ನು ತೆರವುಗೊಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv