‘ಸೋನಿಯಾ ಅಳಿಯ ಕಾಂಗ್ರೆಸ್​ ಸೇರೋದಾದ್ರೆ ಯಾರು ಬೇಡ ಅಂತಾರೆ?’: ರಾಜ್ ​ಬಬ್ಬರ್

ನವದೆಹಲಿ: ಕಾಂಗ್ರೆಸ್​ ಪಾಳಯದಲ್ಲಿ ಇತ್ತೀಚೆಗೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್​ ವಾದ್ರಾ ಕಾಂಗ್ರೆಸ್​ ಪಕ್ಷ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದ್ರೆ, ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಘೋಷಣೆಯಾದರೂ, ವಾದ್ರಾ ಪಕ್ಷ ಸೇರ್ಪಡೆಯಾಗಿರಲಿಲ್ಲ. ಈ ಮಧ್ಯೆ ಉತ್ತರ ಪ್ರದೇಶ ಕಾಂಗ್ರೆಸ್​ ​ಮುಖ್ಯಸ್ಥ ರಾಜ್ ​ಬಬ್ಬರ್ ನೀಡಿರುವ ಹೇಳಿಕೆ, ವಾದ್ರಾ ಪಾಲಿಟಿಕ್ಸ್​ ಪಾದಾರ್ಪಣೆ ವದಂತಿಗೆ ರೆಕ್ಕೆಪುಕ್ಕ ನೀಡಿದೆ. ಪಕ್ಷ ಸೇರ್ಪಡೆ ನಿರ್ಧಾರ ವಾದ್ರಾಗೆ ಬಿಟ್ಟಿದ್ದು ಎಂದಿರುವ ರಾಜ್​ ಬಬ್ಬರ್, ಅವರ ಪಾಲಿಟಿಕ್ಸ್​ ಎಂಟ್ರಿ ಕುರಿತು ಪಕ್ಷ ನಿರ್ಧರಿಸುತ್ತೆ. ಒಂದು ವೇಳೆ ವಾದ್ರಾ ರಾಜಕೀಯಕ್ಕೆ ಬರೋದಾದ್ರೆ, ಅವರನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ, ಅವರು ಒಂದು ವೇಳೆ ಪಕ್ಷಕ್ಕೆ ಬರೋದಾದ್ರೆ, ಅವರನ್ನು ಪಕ್ಷ ಮುಕ್ತ ಮನಸ್ಸಿನಿಂದ ಬರಮಾಡಿಕೊಳ್ಳುತ್ತದೆ. ಅವರು ಕೂಡ ಗಾಂಧಿ ಕುಟುಂಬದವರಾಗಿರೋದ್ರಿಂದ, ಅವರು ಪಕ್ಷದ ಭಾಗವಾಗೋದನ್ನ ಯಾರು ತಡೆಯೋರು ಅಂತ ಪ್ರಶ್ನಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv