ಮಂಗಳೂರು, ಉಡುಪಿಯಲ್ಲಿ ಉತ್ತಮ ಮಳೆ

ಮಂಗಳೂರು: ರಾಜ್ಯದ ಕರಾವಳಿಯ ಅವಿಭಜಿತ ಜಿಲ್ಲೆಗಳಾದ ಮಂಗಳೂರು ಹಾಗೂ ಉಡುಪಿಗೆ ಮುಂಗಾರು ಪ್ರವೇಶ ಮಾಡಿದೆ. ಇಂದು ಬೆಳಿಗ್ಗೆನಿಂದಲೇ ಆರಂಭವಾದ ಜಿಟಿ- ಜಿಟಿ ಮಳೆ ಸಂಜೆ ವೇಳೆಗೆ ತೀವ್ರತೆ ಹೆಚ್ಚಾಗಿದೆ. ಮಂಗಳೂರಿನ ನಗರದೆಲ್ಲೆಡೆ ಹಾಗೂ ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ, ಸುಳ್ಯ ಹಾಗೂ ಪುತ್ತೂರಿನಲ್ಲಿ ಮುಂಗಾರು ಪ್ರವೇಶದ ಮೊದಲ ದಿನವೇ ಉತ್ತಮ ಮಳೆಯಾಗಿದೆ. ಇನ್ನು ಉಡುಪಿಯ ಕಾಪು, ಬೈಂದೂರು, ಕಾರ್ಕಳ, ಕುಂದಾಪುರದಲ್ಲಿಯೂ ಉತ್ತಮ ಮಳೆಯಾಗಿದೆ.
ವಾರದ ಹಿಂದೆ ವರಣ ಅರ್ಭಟಿಸಿದ್ದ ಪರಿಣಾಮ ಮಂಗಳೂರಿನಾದ್ಯಂತ ಕೃತಕ ನೆರೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕೂಡ ಮಳೆಗೆ ಸಕಲ ಸಿದ್ಧತೆ ನಡೆಸಿದ್ದು, ತರಾತುರಿಯಲ್ಲಿ ಚರಂಡಿ ಸರಿಪಡಿಸುವ ಕೆಲಸ ನಡೆಸಿದೆ. ಮುಂದಿನ ಎರಡು ತಿಂಗಳ ಕಾಲ ಮೀನುಗಾರಿಕೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು, ನಾಡದೋಣಿ ಮೀನುಗಾರರಿಗೆ ಸದ್ಯಕ್ಕೆ ಮೀನುಗಾರಿಕೆ ಮಾಡದಂತೆ ಸೂಚಿಸಲಾಗಿದೆ. ಅಲ್ಲದೇ ಹವಾಮಾನ ಇಲಾಖೆ 4 ದಿನಗಳ ಕಾಲ ಜೋರಾಗಿ ಮಳೆ ಬರುವ ಮುನ್ಸೂಚನೆ ನೀಡದೆ.