ಮಳೆ ಕಾಟ: ಮುಳ್ಳಯ್ಯನಗಿರಿ ತುದಿಯಿಂದ ರಸ್ತೆಗೆ ಬೀಳುತ್ತಿವೆ ಬಂಡೆ ಕಲ್ಲು..!

ಚಿಕ್ಕಮಗಳೂರು: ಧಾರಾಕಾರ ಮಳೆಯಿಂದಾಗಿ ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿದಿದ್ದು, ರಸ್ತೆಗೆ ಭಾರೀ ಗಾತ್ರದ ಬಂಡೆ ಕಲ್ಲುಗಳು ಉರುಳಿ ಬೀಳುತ್ತಿವೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಳ್ಳಯ್ಯನಗಿರಿ ಗುಡ್ಡದ ಮೇಲ್ಪದರ ಕುಸಿದಿದ್ದು, ಸಡಿಲಗೊಂಡ ಬಂಡೆ ಕಲ್ಲುಗಳು ಮೇಲಿನಿಂದ ಜಾರಿ ರಸ್ತೆಗೆ ಬೀಳುತ್ತಿವೆ. ವೀಕೆಂಡ್ ಹಿನ್ನೆಲೆ ಸಾವಿರಕ್ಕೂ ಹೆಚ್ಚು ವಾಹನಗಳು ಮುಳ್ಳಯ್ಯನಗಿರಿಗೆ ಪ್ರವಾಸ ಬಂದಿದ್ದು, ಚಲಿಸುತ್ತಿದ್ದ ಮಿನಿ ಬಸ್ ಒಂದರ ಮುಂಭಾಗಕ್ಕೆ ಬಂಡೆ ಕಲ್ಲು ಬಿದ್ದಿದ್ದು ಮಿನಿ ಬಸ್​ ಸ್ವಲ್ಪದರಲ್ಲೇ ಪಾರಾಗಿದೆ. ರಸ್ತೆಯ ನಾಲ್ಕು ಕಡೆ ಗುಡ್ಡ ಕುಸಿದಿದ್ದು, ಪ್ರವಾಸಿಗರು ಆತಂಕದಲ್ಲೇ ಸಂಚರಿಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv