ನಿಲ್ಲದ ವರುಣನ ಅಬ್ಬರ.. ಮನೆಗಳಿಗೆ ನೀರು ನುಗ್ಗಿ ಅವಾಂತರ!

ಕೊಪ್ಪಳ: ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕಾರಟಗಿ ತಾಲೂಕಿನ ಗುಂಡೂರು ಕ್ಯಾಂಪ್‌ನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಇದ್ರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಗೆ ನುಗ್ಗಿದ ಮಳೆ ನೀರನ್ನ ಹೊರ ಚೆಲ್ಲುವಲ್ಲಿ ಜನರು ನಿರತರಾಗಿದ್ದಾರೆ.

ಇನ್ನು ಮನೆಗಳಿಗೆ ಮಳೆ ನೀರು ನುಗಿದ್ದರಿಂದ ರಾತ್ರಿ ಇಡೀ ಜನರು ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಮನೆಯಲಿದ್ದ ದವಸ ಧಾನ್ಯಗಳು ನೀರಿನಲ್ಲಿ ನೆನೆದಿವೆ. ಸಿಸಿ ರಸ್ತೆಯಿಂದ ನೀರು ಹರಿದು ಮುಂದೆ ಹೋಗದೇ ಮನೆಗಳಿಗೆ ನುಗ್ಗಿದೆ  ಎಂದು ತಿಳಿದು ಬಂದಿದೆ. ಮಳೆ ನೀರು ನುಗ್ಗಿದ್ದರಿಂದ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಜನ್ರು ಹಿಡಿಶಾಪ ಹಾಕುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv