ಮುಂದುವರಿದಿದೆ ಮಳೆಗೆ ಸಿಲುಕಿದ 150 ಕುಟುಂಬಗಳ ರಕ್ಷಣಾ ಕಾರ್ಯ

ಐಜ್ವಾಲ್​: ಭಾರೀ ಮಳೆ ಹಾಗೂ ಆಗಾಗ್ಗೆ ಬೀಸಿದ ಬಿರುಗಾಳಿಯಿಂದ ಮಿಜೋರಾಮ್​ನ ಅನೇಕ ಕಡೆ ಅನಾಹುತಗಳು ಸಂಭವಿಸಿದೆ. ಮಣ್ಣಿನ ಕುಸಿತದಿಂದಾಗಿ ಅಲ್ಲಲ್ಲಿ ಉಂಟಾದ ಕೊಚ್ಚೆಗಳು ಮತ್ತು ಕಂದಕಗಳಿಂದಾಗಿ ರಸ್ತೆಗಳು ಬಂದ್ ಆಗಿವೆ. ವಿಪತ್ತು ನಿರ್ವಹಣಾ ಇಲಾಖೆಯು ಇಕ್ಕಟ್ಟಿಗೆ ಸಿಲುಕಿದ 150 ಕ್ಕೂ ಹೆಚ್ಚು ಕುಟುಂಬಗಳ ನೆರವಿಗೆ ಧಾವಿಸಿದೆ.

ಭಾನುವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಿಜೋರಾಮ್​ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಒಳರಸ್ತೆಗಳು, ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ. ಭಾರಿ ಮಳೆಯಿಂದಾಗಿ ಬಂದ್ ಆಗಿರುವಂತಹ ರಸ್ತೆಯನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv