ಮುಂಗಾರು ವಿಕೋಪ ತಂಡ ರೆಡಿ… ಜನರೇ ಟೆನ್ಶನ್‌ ಬಿಡಿ..!

ಕೊಡಗು: ಮುಂಗಾರು ಮಳೆ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಬಹುದಾದ ಭೂಕುಸಿತ, ಸಂಚಾರಕ್ಕೆ ಅಡ್ಡಿ, ಸಿವಿಲ್ ಕಾರ್ಯಗಳು ಮತ್ತು ಸಂತ್ರಸ್ತರನ್ನು ಸ್ಥಳಾಂತರ ಮಾಡುವುದು, ಮತ್ತಿತರ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸಲು ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಮಡಿಕೇರಿ ತಾಲೂಕಿನ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬೊಳಿಬಾಣೆ ಮತ್ತು ಅಯ್ಯಂಗೇರಿ ವ್ಯಾಪ್ತಿಗೆ ತಹಶೀಲ್ದಾರರು(ತಂಡದ ಮುಖ್ಯಸ್ಥರು), ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍, ಸೆಸ್ಕ್ ಸಹಾಯಕ ಇಂಜಿನಿಯರ್, ಹೋಬಳಿ ಕೇಂದ್ರದ ಪರಿವೀಕ್ಷಕರು, ಗ್ರಾ.ಪಂ. ಅಬಿವೃದ್ಧಿ ಅಧಿಕಾರಿಗಳು, ವಲಯ ಅರಣ್ಯಧಿಕಾರಿಗಳು, ಅಗ್ನಿಶಾಮಕ ಠಾಣಾಧಿಕಾರಿಗಳ ಹಾಗೂ ಪೊಲೀಸ್ ನಿರೀಕ್ಷಕರನ್ನು ನಿಯೋಜಿಸಲಾಗಿದೆ. (ದೂ. 08272-225691, ಮೊ. 9448870811).

ಮಡಿಕೇರಿ ನಗರಸಭಾ ವ್ಯಾಪ್ತಿಯ ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ ಮತ್ತು ಪುಟಾಣಿ ನಗರ ವ್ಯಾಪ್ತಿಗೆ ಪೌರಾಯುಕ್ತರು(ತಂಡದ ಮುಖ್ಯಸ್ಥರು), ಸೆಸ್ಕ್ ಸಹಾಯಕ ಇಂಜಿನಿಯರ್, ಕಂದಾಯ ಅಧಿಕಾರಿ(ನಗರಸಭೆ), ಅಗ್ನಿಶಾಮಕ ಠಾಣಾಧಿಕಾರಿ. ನಗರಸಭೆ ಕಚೇರಿ 08272-228323, 220579, ನಗರಸಭೆ ನಿಯಂತ್ರಣ ಕೊಠಡಿ 220111, (ಮೊ. 9886418888, 9743132759).

ವಿರಾಜಪೇಟೆ ತಾಲೂಕಿನ ಬೇತ್ರಿ, ಕರಡಿಗೋಡು, ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಪೂಜಿಕಲ್ಲು, ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಲಕ್ಷ್ಮಣ ತೀರ್ಥ, ಕೊಡಂಗೇರಿ, ಗುಹ್ಯ ಕೀರೆಹೊಳೆ, ಬಲ್ಯಮಂಡೂರು ಹರಿಹರ ಸೇತುವೆ ವ್ಯಾಪ್ತಿಗೆ ತಹಶೀಲ್ದಾರ್ (ತಂಡದ ಮುಖ್ಯಸ್ಥರು), ಎಇಇ ಲೋಕೋಪಯೋಗಿ ಇಲಾಖೆ, ಸೆಸ್ಕ್ ಸಹಾಯಕ ಇಂಜಿನಿಯರ್, ಕಂದಾಯ ಪರಿವೀಕ್ಷಕರು, ಗ್ರಾ.ಪಂ. ಪಿಡಿಒ, ವಲಯ ಅರಣ್ಯಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿಗಳು, ಪೊಲೀಸ್ ನಿರೀಕ್ಷಕರು. (ದೂ.08274-249053, ಮೊ. 9113027480).

ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಬೆಟ್ಟದಕಾಡು ವ್ಯಾಪ್ತಿಗೆ ತಹಶೀಲ್ದಾರ್(ತಂಡದ ಮುಖ್ಯಸ್ಥರು), ಎಇಇ ಲೋಕೋಪಯೋಗಿ ಇಲಾಖೆ, ಸೆಸ್ಕ್ ಸಹಾಯಕ ಎಂಜಿನಿಯರ್, ಕಂದಾಯ ಪರಿವೀಕ್ಷಕರು, ಗ್ರಾ.ಪಂ. ಪಿಡಿಒ, ವಲಯ ಅರಣ್ಯಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿ, ಪೊಲೀಸ್ ನಿರೀಕ್ಷಕರು. (ದೂ.08276-282045, ಮೊ.9480073838).

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆ ಉಂಟಾದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಂದ ಮಾಹಿತಿ ಬಂದಲ್ಲಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚನೆ ನೀಡಿದ್ದಾರೆ.