ಕೊಡಗಿನ ರೈಲ್ವೇ ಯೋಜನೆಗೆ ಸಂಸದ ಪ್ರತಾಪ್ ಸಿಂಹ ವಿರೋಧ

ಕೊಡಗು: ಮೈಸೂರಿನಿಂದ ಕೇರಳದ ತಲಚೇರಿಗೆ ಕೊಡಗಿನ ಮೂಲಕ ಸಂಪರ್ಕ ಕಲ್ಪಿಸುವ ಉದ್ದೇಶಿತ ರೈಲ್ವೇ ಯೋಜನೆಗೆ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಅವರು, ರೈಲ್ವೇ ಯೋಜನೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸದಂತೆ ಮನವಿ ಮಾಡಿದರು. ಉದ್ದೇಶಿತ ಯೋಜನೆಯಲ್ಲಿ ಕೊಡಗಿನ ಮೂಲಕ 65 ಕಿಲೋ ಮೀಟರ್​ ಹಾದು ಹೋಗಲಿದೆ. ಹೀಗಾದಲ್ಲಿ ಲಕ್ಷಾಂತರ ಮರಗಳ ಮಾರಣ ಹೋಮವಾಗಲಿದೆ. ನಾಗರಹೊಳೆಯ ವನ್ಯಜೀವಿಗಳಿಗೂ ತೊಂದರೆಯಾಗಲಿದ್ದು, ಕಾವೇರಿ ನದಿ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಕೋರಿದ್ದಾರೆ. ಯೋಜನೆ ವಿರೋಧಿಸಿ ಕೊಡಗಿನಲ್ಲಿ ಸಾಕಷ್ಟು ಹೋರಾಟ ಈ ಹಿಂದೆ ನಡೆದಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv