ಮಳೆ ರಗಳೆ: ಸಖರಾಯಪಟ್ಟಣದ ಚಿಕ್ಕದೇವನೂರು ರೈಲ್ವೆ ಬ್ರಿಡ್ಜ್​ಗೆ ಅಪಾಯ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು-ಬಾಣವರ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಸಖರಾಯಪಟ್ಟಣದ ಚಿಕ್ಕದೇವನೂರು ಬಳಿ ಇರುವ ಅಂಡರ್​ಪಾಸ್ ಬ್ರಿಡ್ಜ್​​ ಅಡಿ ಮಳೆ ನೀರು ತುಂಬಿಕೊಂಡಿದೆ. ಇದರಿಂದಾಗಿ ರಸ್ತೆ ದಾಟಲು ಪ್ರಯಾಸಪಟ್ಟ ಕೆಲವು ವಾಹನಗಳು ಕೆಟ್ಟು ನಿಂತಿದ್ರೆ, ​ಇನ್ನು ಕೆಲವು ವಾಹನಗಳ ಸವಾರರು ನೀರಿನಲ್ಲೇ ಸಾಹಸ ಮಾಡಿ ರಸ್ತೆ ದಾಟಿದ್ರು.

ಈ ಬ್ರಿಡ್ಜ್​ ಮೇಲೆಯೇ ರೈಲ್ವೆ ಹಳಿ ಕೂಡ ಇದ್ದು, ಸತತವಾಗಿ ನಿಲ್ಲುವ ನೀರಿನಿಂದಾಗಿ ಬ್ರಿಡ್ಜ್​ಗೆ ಅಪಾಯ ಆಗುತ್ತದೆ ಅಂತ ಕಳವಳ ವ್ಯಕ್ತಪಡಿಸಿದ ಸ್ಥಳೀಯರು, ಇದಕ್ಕೆಲ್ಲ ಕಾರಣ ರೈಲ್ವೆ ಇಲಾಖೆಯ ಅವೈಜ್ಞಾನಿಕ ಕಾಮಗಾರಿ ಅಂತ ಆರೋಪಿಸುತ್ತಿದ್ದಾರೆ.

ಅಲ್ಲದೇ, ಈ ಹಿಂದೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv