ಯಾವ ಮಗುವಿಗೂ ಇಂತ ಸ್ಥಿತಿ ಬರಬಾರದು: ಮೃತ ಮಧುವಿನ ತಂದೆ

ರಾಯಚೂರು: ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಸಾವಿನ ಪ್ರಕರಣಕ್ಕೆ ಸಂಭಂದಪಟ್ಟಂತೆ ಮೃತ ವಿದ್ಯಾರ್ಥಿನಿ ಮಧು ತಂದೆ ನಾಗರಾಜ್ ಪತ್ತಾರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ತನಿಖೆ ಮಾಡಲು ಸಿಐಡಿಗೆ ಕೊಟ್ಟಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ. ಯಾವ ಮಗುವಿಗೂ ಇಂತ ಸ್ಥಿತಿ ಬರಬಾರದು. ಸಿಐಡಿ ಅಧಿಕಾರಿಗಳು ಘಟನೆ ಬಗ್ಗೆ ನಮ್ಮ ಬಳಿ ವಿಚಾರಿಸಿದರು. ನ್ಯಾಯ ಕೊಡಿಸುವುದಾಗಿ ನಮಗೆ ಭರವಸೆ ಕೊಟ್ಟಿದ್ದಾರೆ. ನನ್ನ ಮಗಳನ್ನ ಈ ಹಿಂದೆ, ಸಾಕಷ್ಟು ಬಾರಿ ಕೇಳಿದರೂ ಏನೂ ಬಾಯಿ ಬಿಟ್ಟಿರಲಿಲ್ಲ. ಸುದರ್ಶನ್ ಕಿರುಕುಳಕ್ಕೆ ಅವಳು ತುಂಬಾನೇ ಹೆದರಿದ್ದಳು. ಸಿಐಡಿಗೆ ಪ್ರಕರಣ ವಹಿಸಿದ್ದೇವೆ, ಸೂಕ್ತ ನ್ಯಾಯ ಸಿಗುತ್ತೆ ಅಂತಾ ಸಚಿವ ನಾಡಗೌಡ ಅವರು ಹೇಳಿದ್ದಾರೆ. ನಮ್ಮ ಮಗಳ ಸಾವಿಗೆ ನ್ಯಾಯ ಸಿಗುತ್ತೆ ಅನ್ನೋ ಭರವಸೆಯಿದೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv