ರಾಯಚೂರು ನಗರ ಶಾಸಕ ಶಿವರಾಜ್​ ಪಾಟೀಲ್​ಗೆ ಸನ್ಮಾನ

ರಾಯಚೂರು: ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ನಗರದ ಖಾಸಗಿ​​​ ಹೋಟೆಲ್​​​​​​​​​​​ನಲ್ಲಿ ಈ ಅಭಿನಂದನಾ ಕಾರ್ಯಕ್ರಮ  ಆಯೋಜಿಸಲಾಗಿತ್ತು. ಆದ್ರೆ ಬಿಜೆಪಿಯ ಅಭಿನಂದನಾ, ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಪಾಲ್ಗೊಂಡಿದ್ದು, ಹಾಕಿರುವ ಕುರ್ಚಿಗಳು ಖಾಲಿ ಹೊಡೆಯುತ್ತಿದ್ದವು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಶಿವರಾಜ್​ ಪಾಟೀಲ್​​, ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿದ ಎಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದೀರಿ, ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೆನೆಂದು ಶಾಸಕ ಶಿವರಾಜ್ ಪಾಟೀಲ್ ಭರವಸೆ ನೀಡಿದರು.
ರಾಯಚೂರು ಬಿಜೆಪಿ ನಗರಾಧ್ಯಕ್ಷ ದೊಡ್ಡ ಮಲ್ಲೇಶ್, ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ ಮುಖಂಡರಾದ ತ್ರಿವಿಕ್ರಮ್ ಜೋಶಿ, ಆರ್​​​ ತಿಮ್ಮಯ್ಯ, ಮಾಜಿ ಶಾಸಕ ಎ.ಪಾಪರಡ್ಡಿ ಮಾಜಿ ಜಿಲ್ಲಾಧ್ಯಕ್ಷ ಅಶೋಕ ಗಸ್ತಿ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv