ರಾಹುಲ್ ಗಾಂಧಿಯ ಅಮೇಥಿ ನಾಮಪತ್ರ ಪುರಸ್ಕೃತ..!

ನವದೆಹಲಿ: ಲೋಕಸಭಾ ಚುನಾವಣೆಗೆ ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿ ಅಮೇಥಿಯಿಂದ ಸಲ್ಲಿಸಿದ್ದ ನಾಮಪತ್ರ ಸರಿಯಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​​ ಕೋರ್ಟ್​ ಹೇಳಿದೆ. ರಾಹುಲ್ ಗಾಂಧಿ ರೌಲ್​ ವಿನ್ಸಿ ಎಂಬ ಹೆಸರಿನಲ್ಲಿ ಇಂಗ್ಲೆಂಡ್ ಪಾಸ್​​ಪೋರ್ಟ್​ ಹೊಂದಿದ್ದು, ಈ ಬಗ್ಗೆ ನಾಮಪತ್ರದಲ್ಲಿ ಮಾಹಿತಿ ನೀಡಿಲ್ಲ ಅಂತ ಪಕ್ಷೇತರ ಅಭ್ಯರ್ಥಿಗಳು ಕೋರ್ಟ್​ ಮೆಟ್ಟಿಲೇರಿದ್ದರು. ಇಂದು ರಾಹುಲ್ ಗಾಂಧಿ ಪರವಾಗಿ ವಾದ ಮಂಡಿಸಿದ ವಕೀಲ ಕೆ.ಸಿ. ಕೌಶಿಕ್, ರಾಹುಲ್ ಗಾಂಧಿ ಭಾರತದಲ್ಲಿ ಜನಿಸಿದ್ದಾರೆ, ಭಾರತದ ಪಾಸ್​​ಪೋರ್ಟ್​​ ಹೊಂದಿದ್ದಾರೆ. ಅವರು ಬೇರೆ ಯಾವುದೇ ದೇಶದ ಪೌರತ್ವ ಹೊಂದಿಲ್ಲ. ಅವರ ಪಾಸ್​​ಪೋರ್ಟ್​, ವೋಟರ್​-ಐಡಿ, ಆದಾಯ ತೆರಿಗೆ ಎಲ್ಲವೂ ಭಾರತದ್ದೇ ಆಗಿದೆ ಎಂದು ಹೇಳಿದ್ರು.

ರೌಲ್ ವಿನ್ಸಿ ಯಾರು, ಎಲ್ಲಿಂದ ಬಂದ ಅನ್ನೋದು ನನಗೆ ಗೊತ್ತಿಲ್ಲ ಎಂದು ಕೌಶಿಕ್​ ತಿಳಿಸಿದ್ರು. ಇನ್ನು ರಾಹುಲ್ ಗಾಂಧಿ ವಿದ್ಯಾರ್ಹತೆ ಸಂಬಂಧ ಕೇಳಿಬಂದ ಆರೋಪಕ್ಕೆ ಉತ್ತರಿಸಿದ ಅವರು, 1995ರಲ್ಲಿ ಕೇಂಬ್ರಿಡ್ಜ್​​ ವಿಶ್ವವಿದ್ಯಾಲಯದಿಂದ ರಾಹುಲ್ ಗಾಂಧಿ ಪಿ.ಹೆಚ್​ಡಿ ಮಾಡಿದ್ದಾರೆ. ಇದರ ಸರ್ಟಿಫಿಕೇಟ್​​ನ ಪ್ರತಿಯನ್ನ ಲಗತ್ತಿಸಿದ್ದೇನೆ ಎಂದು ತಿಳಿಸಿದ್ರು. ಅಮೇಥಿಯ ಚುನಾವಣಾಧಿಕಾರಿಗಳು​ ಇದೀಗ ರಾಹುಲ್ ಗಾಂಧಿ ನಾಮಪತ್ರವನ್ನು ಸ್ವೀಕರಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv