ನಿಖಿಲ್​​​ ಕುಮಾರಸ್ವಾಮಿ ಪರ ಇಂದು ರಾಹುಲ್ ಗಾಂಧಿ ರೋಡ್​ ಶೋ

ಮೈಸೂರು: ಇಂದು ಮೈಸೂರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಜಿಲ್ಲೆಯೆ ಕೆ.ಆರ್ ನಗರದ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ  ಇಂದು ಸಂಜೆ 5. 30ಕ್ಕೆ ಮೈತ್ರಿಪಕ್ಷಗಳ ಜಂಟಿ‌ ಸಮಾವೇಶ ಏರ್ಪಡಿಸಲಾಗಿದೆ. ನಂತರ ರೋಡ್ ಶೋ ಮೂಲಕ  ಸಂಜೆ 5:30ರಿಂದ ಸಂಜೆ 7 ಗಂಟೆವರೆಗೂ ಕೆ.ಆರ್. ನಗರದಲ್ಲಿ, ನಿಖಿಲ್ ಪರ ರಾಹುಲ್ ಗಾಂಧಿ ಮತಯಾಚನೆ ಮಾಡಲಿದ್ದಾರೆ. ರೋಡ್​ಶೋಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಾಥ್​ ನೀಡಲಿದ್ದಾರೆ. ನಂತರ ಮೈಸೂರಿನ ಏರ್​ಪೋರ್ಟ್ ಮೂಲಕ ಸಂಜೆ 7:50 ರಾಹುಲ್ ಗಾಂಧಿ  ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv