ನಾನು ಕೊಡುವ ₹ 72 ಸಾವಿರ ಹಣ ನೇರವಾಗಿ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ -ರಾಹುಲ್​

ಚಿತ್ರದುರ್ಗ: ನಾನು ಪ್ರಧಾನಿ ಮೋದಿ ಮಾದರಿ ಚೌಕಿದಾರ ಆಗಲು ಇಷ್ಟಪಡಲ್ಲ. ಆದ್ರೆ ನಿಮ್ಮ ಯೋಗಕ್ಷೇಮ ನೋಡಿಕೊಳ್ಳುವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಅವರು ದುರ್ಗದಲ್ಲಿಂದು ಲೋಕಸಭಾ ಚುನಾವಣಾ ಪ್ರಚಾರ ಭಾಷಣ ವೇಳೆ ತಿಳಿಸಿದರು. ​​
ಅವರು 15 ಲಕ್ಷ ರೂ ಪ್ರತಿಯೊಬ್ಬರಿಗೂ ನೀಡುವೆ ಎಂದಿದ್ದರು. ಆದ್ರೆ 5 ವರ್ಷ ಆದ್ರೂ ಇನ್ನೂ ಹಾಕಿಲ್ಲ. ಅವರಿನ್ನು ಹಾಕುವುದೂ ಇಲ್ಲ. ಆದ್ರೆ ನಾನು ಹಾಗಲ್ಲ. 72 ಸಾವಿರ ರೂಗಳನ್ನು ನಾನು ಎಲ್ಲರಿಗೂ ಕೊಡುವೆ. ಆದ್ರೆ ಗಮನಿಸಿ. ನಾನು ಈ ಹಣವನ್ನು ಮಹಿಳೆಯರ ಖಾತೆಗೆ ಹಾಕುವೆ. ಇದರಿಂದ ನೀವು ಪುರುಷರು ಬೇಸರ ಮಾಡಿಕೊಳ್ಳಬೇಡಿ. ನಾನು 5 ವರ್ಷ ಕಾಲ ₹ 72 ಸಾವಿರದಂತೆ ನೇರವಾಗಿ ಮಹಿಳೆಯರ ಖಾತೆಗಳಿಗೆ ಹಣ ಹಾಕುವೆ ಎಂದು ಭರವಸೆ ನೀಡಿದರು. ಕೋಟ್ಯಂತರ ಬಡವರಿಗೆ ಈ ಹಣ ನೀಡಲು ನನಗೆ ಸಂತೋಷವಾಗುತ್ತದೆ ಎಂದರು.