‘ಮೈತ್ರಿ ಸರ್ಕಾರವನ್ನು ಹೆಚ್​ಡಿಕೆಯೇ ಮುಂದುವರಿಸಲಿ’ : ರಾಹುಲ್​

ಬೆಂಗಳೂರು: ಲೋಕಸಭಾ ಫಲಿತಾಂಶದಿಂದ ರಾಜ್ಯದಲ್ಲಿ ಜೆಡಿಎಸ್​-ಕಾಂಗ್ರೆಸ್​ ತೀವ್ರವಾಗಿ ಮುಖಭಂಗಕ್ಕೊಳಗಾದ ನಂತರ ರಾಜ್ಯದ ದೋಸ್ತಿ ಸರ್ಕಾರ ಪತನವಾಗುತ್ತೆ ಅಂತಾನೇ ಹೇಳಲಾಗ್ತಿತ್ತು. ಆದ್ರೆ ಇದೀಗ ದೋಸ್ತಿ ಸರ್ಕಾರಕ್ಕೆ ಕಾಂಗ್ರೆಸ್​ ಹೈಕಮಾಂಡ್​ ಅಭಯ ನೀಡಿದೆ.
ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಬೇಡ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹೆಚ್​.ಡಿ ಕುಮಾರಸ್ವಾಮಿ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರಿಸೋಣ. ಮೈತ್ರಿ ಸರ್ಕಾರವನ್ನ ಹೆಚ್​ಡಿಕೆಯೇ ಮುಂದುವರಿಸಲಿ ಎಂದು ರಾಜ್ಯ ಕೈ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಿರುವ ರಾಹುಲ್​ ಗಾಂಧಿ, ಹಾಗೇನಾದ್ರು ಅನಿವಾರ್ಯ ಪರಿಸ್ಥಿತಿ ಬಂದಲ್ಲಿ ಸಿಎಂ ಸ್ಥಾನವನ್ನ ಮತ್ತೊಬ್ಬರಿಗೆ ನೀಡೋಣ ಆದ್ರೆ, ಅಲ್ಲಿಯತನಕ ಹೆಚ್​ಡಿಕೆಯೇ ಮುಂದುವರಿಯಲಿ ಎಂದಿದ್ದಾರೆ. ಅಲ್ಲದೇ ಬಿಜೆಪಿಯವರು ಸರ್ಕಾರವನ್ನ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಬಹುದು, ಆದ್ರೆ ನೀವು ಅದಕ್ಕೆ ಧೃತಿಗೆಡದೆ ಸಮನ್ವಯತೆಯಿಂದ ಕೆಲಸ ಮಾಡಿ. ಯಾರೂ ಗೊಂದಲಕ್ಕೆ ಅವಕಾಶ ಮಾಡಿಕೊಡ್ಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.