ಜಲಿಯನ್​ವಾಲಾಬಾಗ್​​ ಹತ್ಯಾಕಾಂಡಕ್ಕೆ 100 ವರ್ಷ: ರಾಹುಲ್ ಗಾಂಧಿ ಶ್ರದ್ಧಾಂಜಲಿ

ಅಮೃತ್​​​ಸರ್​​​ನಲ್ಲಿ ನೂರಾರು ಮುಗ್ಧ ಜನರ ನರಮೇಧಕ್ಕೆ ಕಾರಣವಾದ ಜಲಿಯನ್​​ವಾಲಾಬಾಗ್​​​​​ ಹತ್ಯಾಕಾಂಡಕ್ಕೆ ಇಂದು 100 ವರ್ಷ. ಈ ಹಿನ್ನೆಲೆ ದೇಶದ ವಿವಿಧೆಡೆ ಇಂದು ಸ್ಮರಣಾ ಕಾರ್ಯಕ್ರಮ ನಡೆಯುತ್ತಿದೆ. ಪಂಜಾಬ್​​ನ ಜಲಿಯನ್​​ವಾಲಾಭಾಗ್​​​ ಸ್ಮಾರಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,  ಭಾರತದ ಬ್ರಿಟೀಷ್​​ ಹೈ ಕಮಿಷನರ್​​ ಸರ್​ ಡೊಮಿನಿಕ್ ಆಶ್​ಕ್ವಿತ್, ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​​​​  ಹಾಗೂ ಸಚಿವ ನವಜೋತ್​ ಸಿಂಗ್​ ಸಿಧು ದುರಂತದಲ್ಲಿ ಮಡಿದವವರಿಗೆ ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಡೊಮಿನಿಕ್, 100 ವರ್ಷಗಳ ಹಿಂದೆ ನಡೆದ ಜಲಿಯನ್​​ವಾಲಾಬಾಗ್​​ ಹತ್ಯಾಕಾಂಡ ಬ್ರಿಟೀಷ್​​- ಭಾರತದ ಇತಿಹಾಸದಲ್ಲೇ ನಾಚಿಕೆಗೇಡಿನ ಕೃತ್ಯ. ಅಂದು ನಡೆದ ಘಟನೆಗೆ ಹಾಗೂ ನೋವಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ವಿಸಿಟರ್ಸ್​​ ಬುಕ್​​​ನಲ್ಲಿ ಬರೆದಿದ್ದಾರೆ.

ನಿನ್ನೆ ರಾತ್ರಿಯೇ ಅಮೃತ್​​ಸರ್​​ಗೆ ಆಗಮಿಸಿದ ರಾಹುಲ್ ಗಾಂಧಿ, ಇಂದು ಗೋಲ್ಡನ್​​​ ಟೆಂಪಲ್​​ನಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಜಲಿಯನ್​​ವಾಲಾಬಾಗ್​​ ಸ್ಮಾರಕಕ್ಕೆ ಹೋಗಿ ಶ್ರದ್ಧಾಂಜಲಿ ಸಲ್ಲಿಸಿದರು.

ಇದನ್ನೂ ಓದಿ: ಜನರಲ್​ ಡಯರ್​​ ಎಂಬ ರಾಕ್ಷಸ 370ಕ್ಕೂ ಹೆಚ್ಚು ದೇಶ ಭಕ್ತರ ಸಾಯಿಸಿ ಆಯ್ತು 100 ವರ್ಷ..!

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv