ಇಂದು ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿಯಿಂದ ಇಫ್ತಾರ್​ಕೂಟ

ದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ರಂಜಾನ್​ ಹಬ್ಬದ ಅಂಗವಾಗಿ ಇಂದು ಇಫ್ತಾರ್​ ಕೂಟ ಆಯೋಜಿಸಿದ್ದಾರೆ. ಇದರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್​​ ಮುಖರ್ಜಿ, ಪ್ರತಿಭಾ ಪಾಟೀಲ್​, ಮಾಜಿ ಉಪರಾಷ್ಟ್ರಪತಿ ಹಮೀದ್​ ಅನ್ಸಾರಿ ಸೇರಿದಂತೆ ಹಲವು ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ.

ವಿರೋಧ ಪಕ್ಷಗಳ ಮುಖಂಡರು ಹಾಗೂ ಹಿರಿಯ ನಾಯಕರನ್ನೂ ಇಫ್ತಾರ್ ​ಕೂಟಕ್ಕೆ ಆಹ್ವಾನಿಸಿರುವ ರಾಹುಲ್​ಗಾಂಧಿ, ಇದೇ ಮೊದಲ ಬಾರಿಗೆ ದೆಹಲಿಯ ತಾಜ್ ಪ್ಯಾಲೇಸ್​ ಹೋಟೆಲ್​ನಲ್ಲಿ ಕೂಟವನ್ನ ಆಯೋಜನೆ ಮಾಡಿದ್ದಾರೆ. ಪ್ರತಿಪಕ್ಷಗಳ ನಾಯಕರು ಸೇರಿದಂತೆ ಕಾಂಗ್ರೆಸ್​ನ ಎಲ್ಲ ಮುಖಂಡರನ್ನ ಹಾಗೂ ಕೆಲವು ಹಿರಿಯ ಅಧಿಕಾರಿಗಳನ್ನು ಇಫ್ತಾರ್​ಕೂಟಕ್ಕೆ ಆಹ್ವಾನಿಸಲಾಗಿದೆ.
2015ರಲ್ಲಿ ಸೋನಿಯಾಗಾಂಧಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ರು. ಮೂರು ವರ್ಷಗಳ ಬಳಿಕ ರಾಹುಲ್​ಗಾಂಧಿ ಇಫ್ತಾರ್​ಕೂಟವನ್ನ ಆಯೋಜಿಸುತ್ತಿದ್ದು, ಇದರಲ್ಲಿ ಎಲ್ಲಾ ವಿಪಕ್ಷಗಳ ನಾಯಕರೂ ಭಾಗಿಯಾಗ್ತಿರೋದು ಹೊಸ ಕುತೂಹಲ ಮೂಡಿಸಿದೆ. ಇದೇ ವೇಳೆ ಇಂದು ಅಮೇಥಿಗೆ ತೆರಳಬೇಕಿದ್ದ ರಾಹುಲ್ ಪ್ರವಾಸ ರದ್ದಾಗಿದೆ. ರಂಜಾನ್ ಹಿನ್ನೆಲೆಯಲ್ಲಿ ರಾಹುಲ್​​ಗೆ ಭದ್ರತೆ ಒದಗಿಸಲು ಕಷ್ಟ ಅಂತ ಅಲ್ಲಿನ ಪೊಲೀಸ್ ಆಡಳಿತ ಹೇಳಿರುವ ಹಿನ್ನೆಲೆಯಲ್ಲಿ ತಮ್ಮ ಸಂಸದೀಯ ಕ್ಷೇತ್ರ ಅಮೇಥಿ ಭೇಟಿಯನ್ನ ರಾಹುಲ್ ರದ್ದುಗೊಳಿಸಿದ್ದಾರೆ. ಇಲ್ಲದಿದ್ರೆ ಇಂದಿನಿಂದ ಅವರ ಅಮೇಥಿ ಪ್ರವಾಸವೂ ಆರಂಭವಾಗಬೇಕಿತ್ತು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv