ಇವತ್ತು ರಾಮನವಮಿ ಶುಭಾಶಯ ಕೋರಿದ ರಾಹುಲ್ ಗಾಂಧಿ

ನವದೆಹಲಿ: ನಿನ್ನೆ ದೇಶದಾದ್ಯಂತ ರಾಮನವಮಿ ಹಬ್ಬವನ್ನು ಆಚರಿಸಲಾಗಿದೆ. ಆದ್ರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ರಾಮನವಮಿಯ ಶುಭಾಶಯ ಕೋರಿದ್ದಾರೆ. ಇಂದು ಮಧ್ಯಾಹ್ನ ಟ್ವೀಟ್​ ಮಾಡಿರೋ ರಾಹುಲ್, ನಿಮ್ಮೆಲ್ಲರಿಗೂ ರಾಮನವಮಿಯ ಈ ಪಾವನ ದಿನದಂದು ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ. ಜೊತೆಗೆ ಬೈಸಾಕಿ, ಒಡಿಯಾ ಹೊಸ ವರ್ಷ ಹಾಗೂ ಹನುಮಾನ್​ ಜಯಂತಿಗೂ ಶುಭಕೋರಿ ಟ್ವೀಟ್​ ಮಾಡಿದ್ದಾರೆ. ಆದ್ರೆ, ರಾಮನವಮಿ ಇದ್ದಿದ್ದು ನಿನ್ನೆ ಎಂದು ಕೆಲವರು ರಾಹುಲ್ ಗಾಂಧಿಗೆ ಕಮೆಂಟ್​​ಗಳಲ್ಲಿ ಕುಟುಕಿದ್ದಾರೆ.