ಪ್ರಚಾರಕ್ಕಾಗಿ ರಾಹುಲ್ ಗಾಂಧಿ​ ಮೈಸೂರಿಗೆ ಬಂದ್ರೂ, ಅಭ್ಯರ್ಥಿಗಳೇ ಬರಲಿಲ್ಲ..!

ಮೈಸೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೂ ಮಂಡ್ಯ ಕಾಂಗ್ರೆಸ್ ರೆಬೆಲ್ ನಾಯಕರು ಗೈರಾಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದ್ರೆ ನಾಲ್ವರು ಅಭ್ಯರ್ಥಿಗಳು ಗೈರುಹಾಜರಾಗಿದ್ದರು. ದೂರದ ತುಮಕೂರು ಮೈತ್ರಿ ಅಭ್ಯರ್ಥಿ ದೇವೇಗೌಡ‌ ಮಾತ್ರ ಸಮಾವೇಶದಲ್ಲಿ ಹಾಜರಿದ್ದರು.

ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ರಮೇಶ್ ಬಾಬು, ಬಂಡಿ ಸಿದ್ದೇಗೌಡ ಗೈರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸಂಧಾನಕ್ಕೂ ಬಗ್ಗದೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ರೆಬಲ್ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ರಾಹುಲ್‌ಗಾಂಧಿ ಸಮಾವೇಶದಲ್ಲಿ ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಮೈಸೂರು ಅಭ್ಯರ್ಥಿ ಸಿ.ಹೆಚ್.ವಿಜಯ್‌ ಶಂಕರ್, ಚಾಮರಾಜನಗರ ಧ್ರುವನಾರಾಯಣ್, ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೈರು ಹಾಜರಾಗಿದ್ದಾರೆ. ಆದ್ರೆ ಕಾರಣ ತಿಳಿದುಬಂದಿಲ್ಲ. ತುಮಕೂರು ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ‌ ಮಾತ್ರ ಸಮಾವೇಶದಲ್ಲಿ ಹಾಜರಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv