ಮೋದಿ, ಮೋದಿ, ಮೋದಿ..ಎಲ್ಲರೂ ಕಳ್ಳರು: ರಾಹುಲ್ ಗಾಂಧಿ

ಕೋಲಾರ: ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ. ಈ ಮೋದಿ ಅನ್ನೋ ಹೆಸರಿನವರೆಲ್ರೂ ಕಳ್ಳರು ಅಂತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ತಮ್ಮನ್ನ ಚೌಕಿದಾರ್ ಎಂದು ಕರೆದುಕೊಳ್ಳುತ್ತಾರೆ. ದೇಶವನ್ನ ಕಾಯುವ ಮೋದಿ ಅನ್ನೋ ಚೌಕಿದಾರ್​ ಶೇಕಡಾ ನೂರರಷ್ಟು ಕಳ್ಳರು. ಅದ್ರಲ್ಲೂ ಮೋದಿ ಅನ್ನೋ ಹೆಸರಿನವರೆಲ್ಲೂ ಕಳ್ಳರೇ. ನೀರವ್ ಮೋದಿ, ಲಲಿತ್ ಮೋದಿ, ಪ್ರಧಾನಿ ಮೋದಿ ಇವ್ರೆಲ್ಲಾ ಕಳ್ಳರು. ಇದು ದೇಶವನ್ನ ಕೊಳ್ಳೆ ಹಡೆಯುವ ತಂಡ. ಈ ತಂಡ ದೇಶವನ್ನ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದೆ. ಯಾಕೆ ಮೋದಿ, ಮೋದಿ, ಮೋದಿ ಅನ್ನೋ ಹೆಸರಿನವರೆಲ್ಲರೂ ಕಳ್ಳರು? ಅಂತಾ ಪ್ರಶ್ನೆ ಮಾಡಿದರು.

ಐದು ವರ್ಷಗಳಲ್ಲಿ ಮೋದಿ ಮಾಡಿದ್ದೇನು? ಕರ್ನಾಟಕ ಸರ್ಕಾರ ಬಡ ರೈತರ ಸಾಲವನ್ನಾ ಮಾಡಿದೆ. ಭಾರತದ ಬಡ ರೈತರ ಸಾಲವನ್ನ ಮೋದಿ ಮನ್ನಾ ಮಾಡಿದ್ದಾರಾ? ಅನೀಲ್ ಅಂಬಾನಿಯನ್ನು ಆಲಂಗಿಸುತ್ತೀರಿ, ದೇಶದ ರೈತರ ಜೊತೆಗೆ ಆಲಂಗಿಸಿಕೊಳ್ಳಲ್ಲ. ಮೇಹುಲ್ ಚೋಕ್ಸಿ, ನೀರವ್ ಮೋದಿ, ವಿಜಯ್ ಮಲ್ಯಾ ಅಂತವರ ಜೊತೆ ಫೋಟೋ ತೆಗೆಸಿಕೊಳ್ಳುತ್ತಿರಿ. ಬಡ ರೈತರ ಜೊತೆ ಯಾಕೆ ಫೋಟೋ ತೆಗೆಸಿಕೊಳ್ಳುವುದಿಲ್ಲ ಅಂತಾ ಪ್ರಶ್ನೆ ಮಾಡಿದರು.