ಮೋದಿ ಸ್ವಯಂಘೋಷಿತ ಚೌಕಿದಾರ್, ಅವ್ರು 15 ಜನರಿಗೆ ಮಾತ್ರ ಸ್ನೇಹಿತ: ರಾಹುಲ್ ವಾಗ್ದಾಳಿ

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಚೌಕಿದಾರ್ ಚೋರ್ ಹೈ ಅಂದ್ರು. ನೀವು ಕೇವಲ 15 ಜನರಿಗೆ ಮಾತ್ರ ಚೌಕಿದಾರ್ ಆಗಿದ್ದೀರಿ. ಎಲ್ಲೇ ಬಂದರೂ ಪ್ರಧಾನಿ ಮೋದಿ ಚೌಕಿದಾರ್ ಅಂತಾರೆ. ಇವರು ಸ್ವಯಂಘೋಷಿತ ಚೌಕಿದಾರ್. ಚೌಕಿದಾರ್ ₹ 15 ಲಕ್ಷ ಕೋಡ್ತಾರೆ ಅಂದುಕೊಂಡಿದ್ದೆ. ₹ 15 ಲಕ್ಷ ಕೊಡಕ್ಕಾಗುತ್ತಾ ಇಲ್ವಾ ಹೇಳಲಿ. ಎಲ್ಲೇ ಹೋದ್ರು ಜನ ಚೌಕಿದಾರ್ ಚೋರ್ ಆಗಿದ್ದಾರೆ ಅಂತಾ ಹೇಳ್ತಿದ್ದಾರೆ. ಮೋದಿ ಜೀ ಚೌಕಿದಾರಿ ಯಾರಿಗಾಗಿ ಮಾಡಿದ್ರಿ? ಚೌಕಿದಾರ್ ಆಗಿದ್ರೆ ನೀವು ಯಾರ ರಕ್ಷಣೆ ಮಾಡಿದ್ದೀರಿ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ರು.

ನಾನೇನು ಚೌಕಿದಾರ್ ಅಲ್ಲ, ನಿಮ್ಮವನು!
ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸುಳ್ಳು ಆಶ್ವಾಸನೆ ನೀಡಿದ್ದರು. ಪ್ರಧಾನಿ ಮೋದಿ ಜನರ ನಂಬಿಕೆಗೆ ದ್ರೋಹ ಎಸೆಗಿದ್ದಾರೆ. ನಾನು ನಿಮ್ಮ ಬಳಿ ಸುಳ್ಳು ಹೇಳಲು ಬಂದಿಲ್ಲ, ನಾನೇನು ಚೌಕಿದಾರ್ ಅಲ್ಲ. ನಾನು ಚೌಕಿದಾರ್ ಆಗಲು ಸಹ ಬಯಸುವುದಿಲ್ಲ. ನಾನು ನಿಮ್ಮ ಹೃದಯದ ಮಾತು ಕೇಳಲು ಬಂದಿದ್ದೇನೆ. ನೀರವ್ ಮೋದಿ, ಅನಿಲ್ ಅಂಬಾನಿಯನ್ನು ಪ್ರಧಾನಿ ತಬ್ಬಿಕೊಳ್ತಾರೆ. ಆದ್ರೆ ಅವರು ಬಡವರನ್ನು ತಬ್ಬಿಕೊಂಡಿದ್ದನ್ನು ನೋಡಿದ್ದೀರಾ? ನಾನು ಬಡವರನ್ನು, ರೈತರನ್ನು ತಬ್ಬಿಕೊಂಡಿರುವುದನ್ನು ನೀವು ನೋಡಿದ್ದೀರಿ ಎಂದು ರಾಹುಲ್ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ಮೋದಿ 15 ಜನರಿಗೆ ಮಾತ್ರ ಸ್ನೇಹಿತರಾಗಿದ್ದಾರೆ. ಆದ್ರೆ ನಾನು ನಿಮ್ಮವನು, ನಿಮಗಾಗಿ ನಾನು ಮಾತನಾಡುತ್ತೇನೆ. ನಿಮ್ಮ ಸಂಕಷ್ಟ, ಭಯವನ್ನು ತೊಡೆದುಹಾಕಲು ಪ್ರಯತ್ನಿಸುತ್ತೇನೆ. ನನಗೆ ಚೌಕಿದಾರ್ ಮಾಡಿರುವ ಆ ಸ್ನೇಹ ಬೇಕಾಗಿಲ್ಲ. ಈ ಸರ್ಕಾರ ರಚನೆಯಾದ ಮೇಲೆ ರೈತರಿಗಾಗಿ ಪ್ರತ್ಯೇಕ ಬಜೆಟ್ ಘೋಷಣೆಯಾಗಲಿದೆ. ಮಧ್ಯಪ್ರದೇಶ, ಛತ್ತೀಸಗಢ್, ರಾಜಸ್ಥಾನ, ಕರ್ನಾಟಕದಲ್ಲಿ ಸಾಲ ಮನ್ನಾ ಮಾಡುವೆ. ಎಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಇದೆಯೋ ಅಲ್ಲಿ ರೈತರ ಸಾಲ ಮನ್ನಾ ಆಗಿದೆ. 10 ದಿನದಲ್ಲಿ ಸಾಲ ಮನ್ನಾ ಮಾಡಿದ ಕೀರ್ತಿ ನಮಗಿದೆ. ಪಾರ್ಲಿಮೆಂಟ್ ನಲ್ಲಿ ರೈತರಿಗಾಗಿ ಹೊಸ ಬಜೆಟ್ ಮಂಡನೆ ಮಾಡುತ್ತೇವೆ. ರೈತರಿಗೆ ಏನಾಗುತ್ತಿದೆ ಅನ್ನೋದು ಗೊತ್ತಾಗಬೇಕು. ಈ ವರ್ಷ ನಮಗಾಗಿ ಸರ್ಕಾರ ಏನು ಮಾಡುತ್ತೆ ಅನ್ನೋದು ಗೊತ್ತಾಗಬೇಕು. ಮೋದಿ ರೀತಿಯಲ್ಲಿ ಸುಳ್ಳು ಸುಳ್ಳು ಬಜೆಟ್ ಮಂಡಿಸಲ್ಲ. ನಮ್ಮ ಸರ್ಜಿಕಲ್ ಸ್ಟ್ರೈಕ್ ಮಾತ್ರ ಬಡವರನ್ನು ಹೊರ ತರುವುದೇ ಆಗಿರುತ್ತದೆ. ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಮಾಡಿ ದೊಡ್ಡ ಶ್ರೀಮಂತರಿಗೆ ಕೊಟ್ಟಿದಾರೆ. ನಮ್ಮ ಅರ್ಥ ವ್ಯವಸ್ಥೆ ಹಾಳು ಮಾಡಿದ್ದಾರೆ. ಅನಿಲ್ ಅಂಬಾನಿಗೆ ನೀಡಿರುವ ಹಣವನ್ನು ಕಿತ್ತು ನಿಮಗೆ ಕೊಡುತ್ತೇನೆ. ನನ್ನ ನ್ಯಾಯ ಯೋಜನೆ ಅಂದ್ರೆ ಅದು ದಲಿತ ಮತ್ತು ಬುಡಕಟ್ಟು ಜನಾಂಗಕ್ಕೆ ಒಳ್ಳೆಯದ್ದಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಒಂದು ಕಡೆ 5 ವರ್ಷಕ್ಕಾಗಿರುವ ಅನ್ಯಾಯ, ಇನ್ನೊಂದು ಕಡೆ ಮುಂದಿನ 5 ವರ್ಷದ ನ್ಯಾಯ. ಈ ಚುನಾವಣೆ ಅನಿಲ್ ಅಂಬಾನಿ ಮತ್ತು ಬಡವರ ನಡುವೆ ನಡೆಯುವ ಚುನಾವಣೆ. ಒಂದು ಕಡೆ ಸುಳ್ಳಿನ ಭರವಸೆ ಇನ್ನೊಂದು ಕಡೆ ಸತ್ಯದ ಭರವಸೆ. ಒಂದು ಕಡೆ ರೈತರಿಗೆ ಅನ್ಯಾಯ, ಮತ್ತೊಂದು ಕಡೆ ಸಾಲ ಮನ್ನಾ ನೀಡುವ ಸತ್ಯ. ದೇಶದಲ್ಲಿ ಸತ್ಯದ ಗೆಲುವು ಆಗಬೇಕಿದೆ. ಸುಳ್ಳಿನ ವಿರುದ್ಧ ನಮ್ಮ ಹೋರಾಟ. ನ್ಯಾಯ್​​ ಯೋಚನೆ ನಮ್ಮದು ಎಂದು ರಾಹುಲ್ ಅಭಿಪ್ರಾಯಪಟ್ಟರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv