ಲೋಕ ಸಮರಕ್ಕೆ ‘ಕೈ’ ಭರ್ಜರಿ ತಯಾರಿ: ರಾಜ್ಯಕ್ಕೆ ಬರ್ತಾರಾ ರಾಹುಲ್-ಪ್ರಿಯಾಂಕ

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ರಾಜ್ಯದಲ್ಲಿ ಮತದಾರರನ್ನ ಸೆಳೆಯಲು ಬೃಹತ್​ ಸಮಾವೇಶಗಳ ಆಯೋಜನೆಗೆ ಕೆಪಿಸಿಸಿ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ, ಫೆ. 23ರಂದು ರಾಯಚೂರು, ಫೆ. 25ರಂದು ಹಾವೇರಿ, ಫೆ. 26ರಂದು ದಕ್ಷಿಣ ಕನ್ನಡ ಹಾಗೂ ಫೆ. 27ರಂದು ವಿಜಯಪುರದಲ್ಲಿ ಸಮಾವೇಶ ನಡೆಸಲು ರಾಜ್ಯ ನಾಯಕರು ಚಿಂತನೆ ನಡೆಸಿದ್ದಾರೆ. ಅಲ್ಲದೇ, ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವ್ರನ್ನ ಕರೆತರಲು ನಿರ್ಧರಿದೆ ಎನ್ನಲಾಗಿದೆ. ಈಗಾಗಲೇ ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದಾರಂತೆ. ಹಾವೇರಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.