ವೋಟರ್​​ ಲಿಸ್ಟ್​ನಲ್ಲಿ ‘ಗೋಡೆ’ ಹೆಸರೇ ಮಿಸ್ಸಿಂಗ್, ವೋಟ್​ ಹಾಕಲ್ವಾ ಎಲೆಕ್ಷನ್ ರಾಯಭಾರಿ ರಾಹುಲ್..?

ಬೆಂಗಳೂರು: ಎಲೆಕ್ಷನ್​​​ ಕಮಿಷನ್​ನ ಬ್ರಾಂಡ್​​ ಅಂಬಾಸಿಡರ್​​​ ಆಗಿರೋ ಮಾಜಿ ಕ್ರಿಕೆಟಿಗ ರಾಹುಲ್​ ಡ್ರಾವಿಡ್​​ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವೋಟ್​ ಮಾಡೋದು ಕಷ್ಟವಾಗಿದೆ. ಯಾಕಂದ್ರೆ, ಸದ್ಯ ಅವರು ವಾಸವಿರುವ ಕ್ಷೇತ್ರದ ವೋಟರ್​ ಲಿಸ್ಟ್​ನಲ್ಲಿ ಡ್ರಾವಿಡ್​ ಹೆಸರಿಲ್ಲ. ರಾಹುಲ್ ದ್ರಾವಿಡ್​​​ ಈ ಹಿಂದೆ ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಿದ್ದರು. ನಂತರ ಆರ್​​ಎಂವಿ ಎಕ್ಸ್​​ ಟೆನ್ಷನ್​ಗೆ ತಮ್ಮ ಮನೆಯನ್ನ ಬದಲಾಯಿಸಿ, ಇಂದಿರಾನಗರ ಕ್ಷೇತ್ರದ ವೋಟರ್​ ಲಿಸ್ಟ್​ನಿಂದ ತಮ್ಮ ಹೆಸರನ್ನ ತೆಗೆಸಿದ್ದರು. ಈಗ ರಾಹುಲ್​​ ಡ್ರಾವಿಡ್​ ಹಾಗೂ ಅವರ ಪತ್ನಿ ವಿಜೇತಾ ಹೆಸರು ಈ ಬಾರಿಯ ವೋಟರ್​​ ಲಿಸ್ಟ್​ನಲ್ಲೇ ಇಲ್ಲ.

ಈ ಕುರಿತು ಬಿಬಿಎಂಪಿ ಕಮಿಷನರ್​ ಎನ್.ಮಂಜುನಾಥ್​ ಪ್ರಸಾದ್ ಮಾತನಾಡಿ, ಇಂದಿರಾನಗರ ಕ್ಷೇತ್ರದ ವೋಟರ್​ ಲಿಸ್ಟ್​ನಿಂದ ಡ್ರಾವಿಡ್ ತಮ್ಮ ಹೆಸರನ್ನ ತೆಗೆಸಿದ್ದರು. ನಂತರ ಹೊಸ ಕ್ಷೇತ್ರದಲ್ಲಿ ರಾಹುಲ್​ ಡ್ರಾವಿಡ್ ತಮ್ಮ ಹೆಸರು ನೊಂದಾಯಿಸಲು ಖುದ್ದಾಗಿ ಹಾಜರಾಗಬೇಕಿತ್ತು. ಆದ್ರೆ ಅದು ಹಾಗೆ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ವೋಟರ್​ ಲಿಸ್ಟ್​ನಲ್ಲಿ ರಾಹುಲ್​ ಡ್ರಾವಿಡ್  ಹೆಸರು ನೋಂದಣಿ ಆಗದಿರುವ ಕುರಿತು ಬೆಂಗಳೂರು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೆ.ಎನ್​.ರಮೇಶ್​ ಮಾತನಾಡಿ, ಡ್ರಾವಿಡ್ ಹೊಸ ಕ್ಷೇತ್ರದಲ್ಲಿ ತಮ್ಮ ಹೆಸರು ನೊಂದಾಯಿಸಲು ಮಾರ್ಚ್​ 16ರೊಳಗೆ ​ ಫಾರ್ಮ್​6  ಅಪ್ಲಿಕೇಷನ್  ಸಲ್ಲಿಸಿಬೇಕಿತ್ತು. ಆದರೆ ಅವರು ಸಲ್ಲಿಸಿಲ್ಲ. ಇನ್ನು, ನಮ್ಮ ಚುನಾವಣಾಧಿಕಾರಿಗಳು ಅವರ ಮನೆಗೆ ಭೇಟಿ
ಕೊಟ್ಟಿದ್ದರು. ಆಗ ಅವರು ವಾಸದ ಸ್ಥಳ ಬದಲಾಯಿಸುವ ಬಗ್ಗೆ ಮಾಹಿತಿ ನೀಡಿದ್ದರೆ ಏನಾದರೂ ಮಾಡಲು ಸಾಧ್ಯವಿತ್ತು ಅಂತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv