ಭ್ರಷ್ಟರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ

ರಾಮನಗರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ. ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಾರೆ ಆದ್ರೆ ವೇದಿಕೆ ಮೇಲೆ ಕುಳಿತಿರುವವರ ಕಡೆ ನೋಡೋದಿಲ್ಲ. ಭ್ರಷ್ಟಾಚಾರ ವಿರುದ್ಧ ಮಾತಾಡ್ತಾರೆ ಆದ್ರೆ ಅವರ ಪಕ್ಕದಲ್ಲೇ ಭ್ರಷ್ಟ ರಾಜಕಾರಣಿ ಯಡಿಯೂರಪ್ಪ ಕುತಿರುತ್ತಾರೆ. ಯಡಿಯೂರಪ್ಪನವರ ಸರ್ಕಾರ ಒಂದು ಭ್ರಷ್ಟ ಸರ್ಕಾರ ಅಂತ ಅಮಿತ್ ಶಾ ಅವರೇ ಹೇಳಿದ್ದಾರೆ ಎಂದು ಪುನರುಚ್ಚರಿಸಿದರು. ಇನ್ನು ಕಪ್ಪು ಹಣ ಹೊರ ತರುತ್ತೇವೆ ಅಂಥ ಹೇಳಿ ದೊಡ್ಡ ಮನುಷ್ಯರು ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುವಂತೆ ಮಾಡಿದ್ರು ಎಂದು ಆರೋಪಿಸಿದರು. ನೀರವ್ ಮೋದಿ 30 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಿದೇಶಕ್ಕೆ ಹೋದ್ರು ಅದು ಯಾರ ಹಣ? ನಿಮ್ಮ ಹಣ, ಅಂತವರ ವಿರುದ್ಧ ಮಾತಾನಾಡುವುದಿಲ್ಲ. ಯಾಕೆ ಅಂದ್ರೆ ಅವರು ಕೂಡ ಗುಜರಾತ್‌ನವರು. ಪ್ರಧಾನಿ ಮೋದಿ ಈವರೆಗೂ ನೀರವ್ ಮೋದಿ ವಿರುದ್ಧ ಮಾತನಾಡಿಲ್ಲ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹರಿಹಾಯ್ದರು.
‘ಜೆಡಿಎಸ್‌ 25 ಸೀಟ್‌ ಗೆಲ್ಲಲ್ಲ’
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಕೂಡ ಮಾತನಾಡಿ, ಮಣ್ಣಿನ‌ಮಕ್ಕಳು ಎಂದು ಹೇಳಿಕೊಳ್ಳುವವರು ಅಧಿಕಾರದಲ್ಲಿದ್ದಾಗ ರೈತರ ಸಾಲಮನ್ನಾ ಮಾಡಲಿಲ್ಲ. ನಾನು ಕೂಡ ಮಣ್ಣಿನ ಮಗನೇ. ದೇವೇಗೌಡರು ಪ್ರಧಾನಿಯಾದಾಗ ಸಾಲಮನ್ನಾ ಮಾಡ್ಲಿಲ್ಲ. ಅಧಿಕಾರ ಇದ್ದಾಗ ಮಾಡದವರು ಅಧಿಕಾರ ಇಲ್ಲದಾಗ ಮಾಡಲಾಗದು ಎಂದು ಜೆಡಿಎಸ್‌ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದರು. ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ 25 ಸೀಟ್ ಕೂಡ ಗೆಲ್ಲೋದಿಲ್ಲ ಅಂತ ಸಿಎಂ ಟೀಕಿಸಿದ್ರು..

Leave a Reply

Your email address will not be published. Required fields are marked *