‘ಕಾಲು ಎಳೆಯುವವರಿದ್ದಾರೆ.. ಬೊಗಳೋ ಎಲ್ಲಾ ನಾಯಿಗಳಿಗೂ ಕಲ್ಲು ಹೊಡೆಯಲಾರೆ’

ತುಪ್ಪದ ಹುಡುಗಿ ರಾಗಿಣಿ ಕನ್ನಡ ಚಿತ್ರರಂಗದಲ್ಲಿ ಒಂದು ಟೈಂನಲ್ಲಿ ಮಿಂಚು ಹರಿಸಿದವರು. ಚಂದನವನದಲ್ಲಿ ಈಗ 10 ವರ್ಷಗಳನ್ನ ಪೂರೈಸಿರೋ ರಾಗಿಣಿ ಸಿನಿಮಾ ವಿಚಾರವಾಗಿ ಅಷ್ಟೇ ಅಲ್ಲ. ಹಲವು ಗಾಸಿಪ್‌ಗಳಿಗೆ, ಹಲವು ಅಂತೆಕಂತೆಗಳಿಗೆ ಸುದ್ದಿಯಾಗಿದ್ರು. ಈ ಬಗ್ಗೆ ತಮ್ಮ ಸಿನಿಜೀವನದ ಅನುಭವದ ಬಗ್ಗೆ ಮಾತಾಡ್ತಾ ತಮ್ಮನ್ನ ಆಗಾಗ್ಗೆ ಕಾಲೆಳಿತಿದ್ದ ಮಂದಿಯ ಕುರಿತು ನಿರ್ಭಿಡೆಯಿಂದ ಮಾತಾಡೋ ರಾಗಿಣಿ ಐ ಡೋಂಟ್‌ ಕೇರ್ ಅಂತಾರೆ.

ಹಲವು ವಿಚಾರಗಳಲ್ಲಿ ಕೆಲವರು ನನ್ನ ಹೆಸ್ರನ್ನ ಮಿಸ್‌ಯೂಸ್ ಮಾಡಿಕೊಂಡಿದ್ದು ಹೌದು. ಆದ್ರೆ ಅದು ತುಂಬಾ ಸಹಜ. ಯಾಕಂದ್ರೆ ಯಾರೋ ಬೆಳೀತಿದಾರೆ, ಯಾರೋ ಹೆಸ್ರು ಚೆನ್ನಾಗಿ ಮಾಡ್ತಿದ್ದಾರೆ, ಯಾರದ್ದೋ ಕ್ಲೀನ್ ಇಮೇಜ್ ಅಂದ್ರೆ, ಕೆಲವರು ಹೇಗಿರ್ತಾರೆ ಅಂದ್ರೆ ಅವರ ಜೀನನದಲ್ಲಿ ಅದೇ ಕೆಲಸ. ಬೆಳೀತಿರೋರ ಹೆಸ್ರು ಕೆಡಿಸಬೇಕು, ಎಲ್ಲಾ ಹಾಳು ಮಾಡಬೇಕು ಅಂತಾ ಕಾಯ್ತಿರ್ತಾರೆ. ಆದ್ರೆ ನಾನು ಹೀಗೆ. ನನಗೆ ನನ್ನ ಲೈಫ್ ಮುಖ್ಯ. ಅದನ್ನ ಲೀಡ್ ಮಾಡ್ತಿನಿ. ಅವರು ಹೀಗ್ ಮಾಡಿದರು, ಹಾಗ್ ಯೂಸ್ ಮಾಡ್ಕೊಂಡ್ರು ಅಂತೆಲ್ಲಾ ನನ್ ಟೈಂನ ಹಾಳು ಮಾಡಲ್ಲ. ಕರ್ಮ ಅನ್ನೋದು ಹೇಗಿರುತ್ತೆ ಅಂದ್ರೆ, ನೀವು ಇನ್ನೊಬ್ಬರಿಗೆ ಏನೋ ಮಾಡಿದ್ರೆ ಮತ್ತೆೆ ಅದು ಅವರನ್ನೇ ಬಂದು ಕಾಡುತ್ತೆ. ರೋಡಲ್ಲಿ ಬೇಕಾದಷ್ಟು ನಾಯಿಗಳಿರ್ತವೆ. ಬೊಗಳ್ತಾ ಇರ್ತವೆ, ಎಲ್ಲಾದಕ್ಕೂ ಕಲ್ಲು ಹೊಡೆಯೋಕಾಗುತ್ತಾ.. ಹಾಗೇ ರಸ್ತೆಯಲ್ಲಿ ಕೆಸರು ಮೇಲೆ ಕಲ್ಲು ಹಾಕಿದ್ರೆ ನಮಗೇ ಅದು ಸಿಡಿಯೋದು..ನಾವು ಯಾವ ರೀತಿ ನಮ್ ಲೈಫ್‌ನ ಜರ್ನಿ ನಡೆಸಬೇಕು ನಮ್ ಕೈಲಿದೆ ಅಂತಾರೆ.