ಹೆಣ್ಣು ಮಕ್ಕಳ ಪಾದಪೂಜೆ ಮಾಡಿದ ರಾಗಿಣಿ..!

ಇವತ್ತು ಶ್ರೀ ರಾಮನವಮಿ. ದೇಶದಾದ್ಯಂತ ಶ್ರೀರಾಮನ ಗುಣಗಾನ ನಡೀತಿದೆ. ಈ ಹಬ್ಬದ ದಿನದಂದು ಜನರು ಪಾನಕ, ಮಜ್ಜಿಗೆ ಹಂಚಿ ಆಚರಿಸುತ್ತಿದ್ದಾರೆ. ಸಿನಿಮಾ ಮಂದಿಯೂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇತ್ತ ‘ಸ್ಯಾಂಡಲ್​ವುಡ್​ ತುಪ್ಪದ ಹುಡುಗಿ’ ರಾಗಿಣಿ ಎಲ್ಲರಿಗೂ ಮಾದರಿಯಾಗುವಂತೆ ಹಬ್ಬ ಆಚರಿಸಿದ್ದಾರೆ.

ಕುಟುಂಬದ ಜೊತೆ ಆಚರಣೆ..!
ರಾಗಿಣಿ ನಿವಾಸದಲ್ಲಿ ಶ್ರೀರಾಮನವಮಿಯನ್ನು ಅದ್ದೂರಿಯಾಗಿ ಆಚರಿಸಲಾಯ್ತು. ರಾಗಿಣಿ ಮೂಲತಃ ಪಂಜಾಬಿ ಮೂಲದ ಬೆಡಗಿ. ರಾಮನವಮಿಯನ್ನು ಪ್ರತಿ ವರ್ಷವೂ ಆಚರಿಸುತ್ತಾರೆ. ಅದರಂತೆ ಈ ಬಾರಿಯೂ ಸೆಲೆಬ್ರೇಟ್ ಮಾಡಿದ್ದಾರೆ. ಹತ್ತಾರು ಹೆಣ್ಣು ಮಕ್ಕಳ ಪಾದಪೂಜೆ ಮಾಡಿ ಹಬ್ಬ ಆಚರಿಸಿದ್ದಾರೆ. ರಾಗಿಣಿ ತಂದೆ- ತಾಯಿಯೂ ಸಂಭ್ರಮದಲ್ಲಿ ಭಾಗಿಯಾಗಿದ್ದರು.