ಯಾರಿಗೇ ಮಗು ಹುಟ್ಟಿದ್ರೂ ಅದಕ್ಕೆ ಮಲ್ಕಾಪೊರೆನೇ ಕಾರಣವಂತೆ, ಡೋಂಟ್​ ಕೇರ್..!

ಬೀದರ್: ಯಾರಿಗಾದ್ರು ಹೆಣ್ಣು ಹುಟ್ಟಿದ್ರೆ ಮಲ್ಕಾಪೂರೆ ಕಾರಣ. ಯಾರಿಗಾದ್ರು ಗಂಡು ಹುಟ್ಟಿದ್ರೂ ಮಲ್ಕಾಪೂರೆನೇ ಕಾರಣ ಅಂತಾ ಬಿಜೆಪಿ ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪೂರೆ ತಮ್ಮ ಬಗ್ಗೆ ತಾವೇ ವ್ಯಂಗ್ಯವಾಡಿದ್ದಾರೆ. ಬೀದರ್- ಪಂಡರಾಪುರ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಸಂಸದ ಭಗವಂತ ಖೂಬಾ ಅವರನ್ನು ಮಾಜಿ ಸಿಎಂ, ದಿವಂಗತ ಧರ್ಮಸಿಂಗ್ ಸ್ಪರ್ಧೆಗೆ ನಿಲ್ಲಿಸಿದ್ದಕ್ಕೆ ಮಲ್ಕಾಪೂರೆನೇ ನಿಲ್ಲಿಸಿದ್ದು ಅಂದ್ರು. ಇದಕ್ಕೂ ಜನ ನಾನೇ ಕಾರಣ ಅಂತ ದೂರಿದ್ರು. ಈಗ ಎಲ್ಲದಕ್ಕೂ ಮಲ್ಕಾಪೊರೆಯನ್ನೇ ದೂರೋದು ಜನಗಳಿಗೆ ಒಂಥರಾ ಫ್ಯಾಷನ್​ ಆಗಿಬಿಟ್ಟಿದೆ. ಇದಕ್ಕೆ ನಾನು ಕೇರ್ ಮಾಡುವುದಿಲ್ಲ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv