ಚಾಕೋಲೇಟ್‌ ಹೀರೋ ಇನ್ಮುಂದೆ ‘ದಿ ವಿಲನ್‌’!

ಸ್ಯಾಂಡಲ್‌ವುಡ್‌ನಲ್ಲಿ ಹ್ಯಾಂಡ್‌ಸಮ್‌ ಹೀರೋಗಳ ಪಟ್ಟಿ ದೊಡ್ಡದೇ ಇದೆ. ಆ ಪಟ್ಟಿಯಲ್ಲಿ ಒಬ್ಬರ ಹೆಸರನ್ನ ಮರೆಯೋಕೆ ಸಾಧ್ಯವೇ ಇಲ್ಲ. ಅವರನ್ನ ನೋಡಿದರೆ ಹುಡ್ಗಿಯರ ತಲೆ ಗಿರಿಗಿರ ಅನ್ನುತ್ತೆ. ಱಂಪ್‌ ಮೇಲೆ ಹೆಜ್ಜೆ ಹಾಕ್ತಿದ್ರೆ, ಹುಡ್ಗಿಯರು ಫಿದಾ ಆಗ್ಬಿಡ್ತಾರೆ. ಇದರಲ್ಲಿ ನೋ ಡೌಟ್‌. ಅಷ್ಟಕ್ಕೂ ಆ ಸುರ ಸುಂದರಾಂಗ ಯಾರು ಗೊತ್ತಾ… ರಘು ಮುಖರ್ಜಿ. ಹೌದು, ರಘು ಮುಖರ್ಜಿ ಪಕ್ಕಾ ಚಾಕ್ಲೇಟ್‌ ಹೀರೋ. ಬಹಳಷ್ಟು ಲವ್‌ ಸಬ್ಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿರೋ ರಘು ಮುಖರ್ಜಿ, ಉತ್ತಮ ನಟ ಅನ್ನೋದು ಕೂಡ ಈಗಾಗಲೇ ಪ್ರೂವ್ ಆಗಿದೆ. ವಿಶೇಷ ಅಂದ್ರೆ, ರಘು ಮುಖರ್ಜಿ ತಮ್ಮ ಕರಿಯರ್‌ನಲ್ಲಿ ಹೊಸ ಚಾಲೆಂಜ್‌ ಸ್ವೀಕರಿಸಿದ್ದಾರೆ. ಅಷ್ಟಕ್ಕೂ ಏನದು ಸವಾಲು ಅಂದ್ರಾ..?

ಪ್ರಜ್ವಲ್ ಜೊತೆ ರಘು ದರ್ಬಾರ್..!
ಇಲ್ಲಿವರೆಗೂ ಲವ್​, ಸೆಂಟಿಮೆಂಟ್, ಕಾಮಿಡಿ, ಪೊಲೀಸ್ ಪಾತ್ರಗಳಲ್ಲಿ ಕಂಡಿದ್ದ ರಘು ಮುಖರ್ಜಿ ಫಸ್ಟ್​ಟೈಮ್​ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅದು ಇನ್ಸ್‌ಪೆಕ್ಟರ್‌ ವಿಕ್ರಂ ಚಿತ್ರದಲ್ಲಿ. ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿಯಾಗಿತ್ತು. ಬಳಿಕ ರಮೇಶ್ ಅರವಿಂದ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು ಅದರ ಬೆನ್ನಲ್ಲೆ ಇದೀಗ ರಘು ಮುಖರ್ಜಿ ಸರದಿ ಬಂದಿದ್ದು “ಇನ್ಸ್‌ಪೆಕ್ಟರ್‌ ವಿಕ್ರಂ ಚಿತ್ರದಲ್ಲಿ ನೆೆಗೆಟಿವ್ ರೋಲ್‌ನಲ್ಲಿ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಹೊರಬಿದ್ದಿದೆ.

ಇನ್ನು, ಇನ್ಸ್‌ಪೆಕ್ಟರ್‌ ವಿಕ್ರಂ ಚಿತ್ರ ಪ್ರಜ್ವಲ್‌ ದೇವರಾಜ್‌ ಅಭಿನಯದ 30 ನೇ ಸಿನಿಮಾ. ಸಿನಿಮಾದಲ್ಲಿ ಕ್ಲಾಸ್ ಅಂಡ್ ಮಾಸ್ ಎಲಿಮೆಂಟ್ ಜೊತೆಗೆ ಫ‌ನ್‌ ಕೂಡ ಇರಲಿವೆಯಂತೆ. ಇದೇ ಮೊದಲ ಬಾರಿಗೆ ಭಿನ್ನ ಪಾತ್ರಕ್ಕೆ ರಘು ಬಣ್ಣ ಹಚ್ಚಲಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ದಯವಿಟ್ಟು ಗಮನಿಸಿ ಸಿನಿಮಾದಿಂದ ಬ್ರೇಕ್ ಪಡೆದಿದ್ದ ರಘು ಈ ಚಿತ್ರದಲ್ಲಿ ನೆಗೆಟಿವ್​ ಶೇಡ್​ನಲ್ಲಿ ಘರ್ಜಿಸಲಿದ್ದಾರೆ. ಚಿತ್ರಕ್ಕೆ ನರಸಿಂಹ ಆ್ಯಕ್ಷನ್ ಕಟ್​ ಹೇಳಿದ್ದಾರೆ.