ಸ್ವಚ್ಚತಾ ಐಕಾನ್ ಕೇಂದ್ರವಾಗಲಿದೆ ರಾಯರ ಮಠ

ರಾಯಚೂರು: ಸ್ವಚ್ಚತಾ ಐಕಾನ್ ಕೇಂದ್ರವನ್ನಾಗಿಸಲು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಭಕ್ತರ ಆರಾಧ್ಯ ದೈವ ರಾಘ್ರವೇಂದ್ರ ಮಠವನ್ನು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯ್ಕೆ ಮಾಡಿದೆ.
ಈಗಾಗಲೇ ಒಂದನೇ ಮತ್ತು ಎರಡನೇ ಹಂತಗಳಲ್ಲಿ 100 ಧಾರ್ಮಿಕ ಸ್ಥಳಗಳನ್ನು ಸ್ವಚ್ಚತಾ ಐಕಾನ್ ಅಡಿಯಲ್ಲಿ ಆಯ್ಕೆ ಮಾಡಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈಗ ಇಲಾಖೆ ಮೂರನೇ ಹಂತದಲ್ಲಿ ರಾಘವೇಂದ್ರ ಮಠವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲಿದೆ.

ಸ್ವಚ್ಚತಾ ಐಕಾನ್ ಯೋಜನೆ ಅಡಿಯಲ್ಲಿ ಆಯ್ಕೆಯಾದ ಧಾರ್ಮಿಕ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ, ನೈರ್ಮಲ್ಯ, ಪ್ಲಾಸ್ಟೀಕ್ ನಿಷೇಧ, ಸ್ವಚ್ಚತಾ ಕಾರ್ಯ ಹೀಗೆ ಕ್ಷೇತ್ರಗಳಲ್ಲಿ ಸ್ವಚ್ಚ, ಸುಂದರ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗುವುದು. ಪುಣ್ಯ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಭಕ್ತರಿಗೆ ಉತ್ತಮ ಪರಿಸರ ಸೃಷ್ಠಿಸುವುದು ಯೋಜನೆಯ ಉದ್ದೇಶವಾಗಿದೆ. ರಾಯರ ಮಠವನ್ನು ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿದ್ದಕ್ಕಾಗಿ ಶ್ರೀ ಮಠದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಶ್ರೀಮಠದ ಪಿಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳು ಕಾರ್ಯಕ್ರಮದಲ್ಲಿ ಮಾತಾಡಿ ಶ್ರೀ ಮಠವನ್ನು ಸ್ವಚ್ಚತಾ ಐಕಾನ್ ತಾಣವಾಗಿ ಮಾಡಲು ಯೋಜನೆಯಲ್ಲಿ ಆಯ್ಕೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv