ಮಗಳ ಜೊತೆಗೆ ಸ್ವೀಟಿ ರಾಧಿಕಾ ಫಾರಿನ್‌ ರೌಂಡ್ಸ್‌..!

ಸ್ಯಾಂಡಲ್​​ವುಡ್​​ನ ಸ್ವೀಟಿ ರಾಧಿಕಾ ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ..? ಅನ್ನೋದಕ್ಕೆ ಅವ್ರ ಫೇಸ್‌ಬುಕ್‌ ಫೇಜು, ಅಕೌಂಟ್‌ ಉತ್ತರ ಹೇಳ್ತಿದೆ. ನಿನ್ನೆಯಷ್ಟೇ ರಾಧಿಕಾ, ಭೈರಾದೇವಿ, ರಾಜೇಂದ್ರ ಪೊನ್ನಪ್ಪನ ಜೊತೆಗೆ ದಮಯಂತಿ ಅನ್ನೋ ಹೊಸ ಸಿನಿಮಾ ಮಾಡ್ತಿರೋ ವಿಚಾರ ಸುದ್ದಿಯಾಯ್ತು. ಆದ್ರೆ ಇವತ್ತು ರಾಧಿಕಾ ಯಾಕೆ ಕೆಲದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ತಿರಲಿಲ್ಲ. ಎಲ್ಲಿ ಹೋಗಿದ್ರೂ ಅನ್ನೋದಕ್ಕೆ ಇವತ್ತು ಅಪ್‌ಲೋಡ್‌ ಆಗಿರೋ ಒಂದು ಫೋಟೋ ಉತ್ತರ ಹೇಳ್ತಿದೆ. ಹೌದು ರಾಧಿಕಾ ಮಗಳ ಜೊತೆಗೆ ಫಾರಿನ್‌ ರೌಂಡ್ಸ್‌ ಹೋಗಿ ಬಂದಿದ್ದಾರೆ. ವಿದೇಶದಲ್ಲಿ ಮಗಳ ಜೊತೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡ್ತಿರೋ ಒಂದು ಫೋಟೋವನ್ನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಒಂದಷ್ಟು ಬ್ಯುಸಿ ವರ್ಕ್‌ ಜೊತೆಗೆ ಒಂದು ಜಾಲಿ ಟ್ರಿಪ್‌ ಮುಗಿಸಿ ಬಂದಿರೋ ರಾಧಿಕಾ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳೋದಕ್ಕೆ ಸಜ್ಜಾಗ್ತಿದ್ದಾರೆ.
ನಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv