ಮತ್ತೆ ಸ್ಮಶಾನದಲ್ಲಿ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್​..!

ತಮ್ಮದೇ ಹೋಮ್​ ಬ್ಯಾನರ್​ನಲ್ಲಿ ತಯಾರಾಗ್ತಾ ಇರೋ ಸಿನಿಮಾ ಭೈರೇದೇವಿಯಲ್ಲಿ, ನಟಿ ರಾಧಿಕಾ ಕುಮಾರಸ್ವಾಮಿ ಅಘೋರಿಯ ಪಾತ್ರದಲ್ಲಿ ನಟಿಸ್ತಾ ಇದ್ದಾರೆ ಅನ್ನೋದು ಹಳೆ ಸುದ್ದಿ. ಇದಕ್ಕಾಗಿ ಕಾಳಿ ಅವತಾರ ತಾಳಿರೋ ರಾಧಿಕಾರನ್ನ ನೋಡಿ ಯಾವ ಬಾಲಿವುಡ್​-ಟಾಲಿವುಡ್​ ನಟಿಯರಿಗೂ ಕಮ್ಮಿ ಇಲ್ಲ ಅನ್ನೋ ಪ್ರಶಂಸೆ ಕೂಡ ಹರಿದು ಬಂದಿದೆ. ಈ ಸಿನಿಮಾದ ಹಾಡೊಂದರ ಸನ್ನಿವೇಷಕ್ಕೆ ಬೆಂಗಳೂರಿನ ಸ್ಮಶಾನ ಒಂದರಲ್ಲಿ ಅಮಾವಾಸ್ಯೆ ರಾತ್ರೀ ಚಿತ್ರೀಕರಣ ನಡೆಸುವಾಗ ರಾಧಿಕಾ ಕುಮಾರಸ್ವಾಮಿ ಸಮಾಧಿ ಒಂದರ ಮೇಲಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ರು, ನಂತ್ರ ಬರೋಬ್ಬರಿ 1 ತಿಂಗಳ ಕಾಲ ವಿಶ್ರಾಂತಿ ಪಡೆದ ನಂತ್ರ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ರು. ಈಗ ಮತ್ತೆ ಅದೇ ಹಾಡಿನ ಚಿತ್ರೀಕರಣ ಮುಂದುವರೆಸಲು ಇಂದು ರಾತ್ರಿ ಸ್ಮಾಶಾನ ಸೇರಲಿದ್ದಾರೆ ರಾಧಿಕಾ.
400 ಅಘೋರಿಗಳ ಜೊತೆ ರಾಧಿಕಾ ಡ್ಯಾನ್ಸ್​..!
ಅರ್ಧಕ್ಕೆ ನಿಂತಿದ್ದ ಭೈರಾದೇವಿ ಚಿತ್ರದ ಹಾಡಿನ ಚಿತ್ರೀಕರಣ ಇಂದು ರಾತ್ರಿ ಸ್ಮಶಾನದಲ್ಲಿ ನಡೆಯಲಿದ್ದು ಹಾಡಿನಲ್ಲಿ 400 ಜನ ಸಹಕಲಾವಿದರು ಅಘೋರಿ ವೇಷದಲ್ಲಿ ಭಾಗಿಯಾಗಲಿದ್ದಾರೆ. ಈ 400 ಜನರಲ್ಲಿ 150 ಜನನುರಿತ ನೃತ್ಯಗಾರರು ಭಾಗಿಯಾಗಲಿದ್ದಾರೆ. ಈ ಹೈ ಬಜೆಟ್​ ಹಾಡಿನ ಚಿತ್ರೀಕರಣದಲ್ಲಿ ಬರೋಬ್ಬರಿ 200 ಜನ ತಂತ್ರಜ್ಞರು ಭಾಗಿಯಾಗಲಿದ್ದಾರೆ. ಶ್ರೀ ಜೈ ಆ್ಯಕ್ಷನ್​ ಕಟ್​ ಹೇಳ್ತಿರೋ ಸಿನಿಮಾ ಇಡೀ ಇಂಡಿಯನ್​ ಸಿನಿಮಾ ಇಂಡಸ್ಟ್ರಿಯೇ ಮಾತನಾಡಿಕೊಳ್ಳುವ ಮಟ್ಟಕ್ಕೆ ಅದ್ಧೂರಿಯಾಗಿ ರೆಡಿಯಾಗ್ತಾ ಇದೆ. ಈಗಾಗ್ಲೆ ಸ್ಮಾಶಾನದಲ್ಲಿ ಶೂಟಿಂಗ್​ ಮಾಡುವ ವೇಳೆ ಕಾಲು ಮುರಿದುಕೊಂದಿದ್ದರೂ ಜಗ್ಗದೇ ಮತ್ತೆ ಶೂಟಿಂಗ್​ಗೆ ಮರಳಿರೋ ರಾಧಿಕಾ ಧೈರ್ಯವನ್ನ ಮೆಚ್ಚುವಂತದ್ದು.