ಎನ್‌ಡಿಎ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ : ಆರ್‌.ವಿ ದೇಶಪಾಂಡೆ

ಹುಬ್ಬಳ್ಳಿ: ದೇಶದಲ್ಲಿ ನಿರುದ್ಯೋಗ ಜ್ವಲಂತ ಸಮಸ್ಯೆಯಾಗಿದೆ. ಇದಕ್ಕೆ ಎನ್‌ಡಿಎ ಸರ್ಕಾರ ಉತ್ತರ ನೀಡಲು ಸಾಧ್ಯವಾಗಿಲ್ಲ. ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದ್ರೆ ಎನ್‌ಡಿಎ ಸರ್ಕಾರ ಇದರಲ್ಲಿ ವಿಫಲವಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ ದೇಶಪಾಂಡೆ ಹೇಳಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 128ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನಾವು ಉದ್ಯೋಗ ಸೃಷ್ಟಿಯ ಕಡೆ ಒತ್ತು ನೀಡಿದ್ದೇವೆ. ಲೋಕಸಭಾ ಚುನಾವಣೆ ನಮ್ಮ ಪ್ರಣಾಳಿಕೆಯಲ್ಲಿ ಹೆಚ್ಚಿನ ಮಹತ್ವ ಉದ್ಯೋಗ ಸೃಷ್ಟಿಗೆ ನೀಡಲಾಗಿದೆ ಎಂದರು. ರೈತರು ಕೂಡಾ ಸಂಕಷ್ಟದಲ್ಕಿ ಇದ್ದಾರೆ. ರಾಜ್ಯದಲ್ಲಿ 155 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದನೆ ಮಾಡುತ್ತಿದೆ. ಈಗಾಗಲೇ ಬರಗಾಲ ನಿರ್ವಹಣೆಗೆ ಹಣ ಕೂಡ ನೀಡಲಾಗಿದೆ. ಜಾನುವಾರುಗಳಿಗೆ ಹಾಗೂ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ದೇಶಪಾಂಡೆ ಹೇಳಿದರು.

ನಮ್ಮ ದೇಶದಲ್ಲಿ ಅಂಬೇಡ್ಕರ್‌ರವರ ವಿಚಾರಧಾರೆಗಳಿಗೆ ಹೆಚ್ಚಿನ ಮಹತ್ವವಿದೆ. ಜಾತ್ಯಾತೀತದಲ್ಲಿ ನಾವೆಲ್ಲರೂ ವಿಶ್ವಾಸ ಇಡಬೇಕಾಗಿದೆ. ದೇಶದಲ್ಲಿ ಬಡತನ, ಅನಕ್ಷರತೆ ಹೋಗಲಾಡಿಸಬೇಕಾಗಿದೆ. ಅದಕ್ಕೆ ನಾವೆಲ್ಲರೂ ಒಟ್ಟುಗೂಡಿಸಿ ಹೋರಾಟ ಮಾಡಬೇಕಾಗಿದೆ. ಅಂಬೇಡ್ಕರ್ ನೀಡಿರುವ ಸಂವಿಧಾನ ದೇಶಕ್ಕೆ ಒಂದು ಪವಿತ್ರವಾದ ಗ್ರಂಥ. ನಮ್ಮ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ. ಇಂದಿನ ದಿನಮಾನಗಳಲ್ಲಿ ಅವರ ಆದರ್ಶ, ವಿಚಾರಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆಯ ಸಂವಿಧಾನ ಬದಲಾಣೆ ಹೇಳಿಕೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಅವರ ಹೇಳಿಕೆಗೆ ಈಗ ಅವರು ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಹೇಳಿಕೆಯಿಂದ ಇಡೀ ದೇಶದ ಜನ ಅವರ ಮೇಲೆ ಮುಗ್ಗಿ ಬಿದ್ದಿದರು. ಆಕ್ರೋಶ ವ್ಯಕ್ತವಾಗುತ್ತಿದಂತೆ ಅವರೇ ಲೋಕಸಭೆಯಲ್ಲಿ ಕ್ಷಮೆ ಕೇಳಿದ್ದಾರೆ ಎಂದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv